Wednesday, 1 September 2021

ವಧು ವರರ ಯದ್ಧರಿಸೊ ಉದಧಿಶಯನ ಒದಗಿಸುತಲಾಯುರಾರೋಗ್ಯ ಸುಜ್ಞಾನ ankita shyamasundara

 ..

ವಧು ವರರ ಯದ್ಧರಿಸೊ ಉದಧಿಶಯನ

ಒದಗಿಸುತಲಾಯುರಾರೋಗ್ಯ ಸುಜ್ಞಾನ ಪ


ಯತಿಪೂಜೆ ಕ್ಷಿತಿದೇವ ತತಿಸೇವೆ

ತಿಥಿತ್ರಯದ ವೃತನೇಮ ಮೊದಲಾದ ಸತ್ಕಕರ್ಮವ

ಮತಿಯಿಂದ ಗೈಯುತಲಿ ಪತಿತಪಾವನ ನಿನ್ನ

ಕಥೆಗಳನು ಕೇಳ್ವದಕೆÉ ರತಿಯಿತ್ತು ಪ್ರತಿದಿನದಿ 1


ಹಿರಿಯರಲಿ ವಿಶ್ವಾಸ ಗುರುಮುಖದಿ ಉಪದೇಶ

ಮರುತ ಸಚ್ಛ್ಯಾಸ್ತ್ರದಔಯಾಸವ

ಪರಮ ಸದ್ಭಕ್ತಿಯಲಿ ನಿರುತದಲ್ಲಿ ಗೈಯುದಕೆ

ಸ್ಥಿರವಾದ ಮನವಿತ್ತು ಮರಿಯದಲೆ ಮಾರಮಣ 2


ಸಾಮಗಾನವಿಲೋಲ ಶಾಮಸುಂದರವಿಠಲ

ಸ್ವಾಮಿಮನ್ನಿಸಿ ಎನ್ನ ಎನ್ನ ವಿಜ್ಞಾಪನೆ

ಯಾಮಯಾಮಕೆ ನಾಮಸುಧೆಯನು ಸವಿಪ

ಈ ಮಹಾಸುಖ ಗರೆದು ಪ್ರೇಮದಿಲಿ ಕೈಪಿಡಿದು 3

***


No comments:

Post a Comment