Showing posts with label ಹೊತ್ತು ಹೋಯಿತಲ್ಲಾ ಹರಿ ನಿನ್ನ ಭೃತ್ಯನಾಗಲಿಲ್ಲ gurushreesha vittala HOTTU HOYITALLA HARI NINNA BRATYANAGALILLA. Show all posts
Showing posts with label ಹೊತ್ತು ಹೋಯಿತಲ್ಲಾ ಹರಿ ನಿನ್ನ ಭೃತ್ಯನಾಗಲಿಲ್ಲ gurushreesha vittala HOTTU HOYITALLA HARI NINNA BRATYANAGALILLA. Show all posts

Sunday, 19 December 2021

ಹೊತ್ತು ಹೋಯಿತಲ್ಲಾ ಹರಿ ನಿನ್ನ ಭೃತ್ಯನಾಗಲಿಲ್ಲ ankita gurushreesha vittala HOTTU HOYITALLA HARI NINNA BRATYANAGALILLA







by ಕುಂಟೋಜಿ ನರಸಿಂಹದಾಸರು  

ಹೊತ್ತು ಹೋಯಿತಲ್ಲಾ ಹರಿ ನಿನ್ನ ಭೃತ್ಯನಾಗಲಿಲ್ಲ 
ಮತ್ತೆ ಮತ್ತೆ ಉನ್ಮತ್ತರ ಸಂಗದಿ 
ಉತ್ತಮರಿಗೆ ಕರವೆತ್ತಿ ಮುಗಿಯದಲೆ                                 ।।ಪ।।

ನಿತ್ಯ ನಿತ್ಯದಲ್ಲಿ ಪರರ ವಿತ್ತವ ಬಯಸುತಲಿ
ಹತ್ತಿ ಹೊಂದಿದವರೆಂದು ಮೋಹಕ ಬಿದ್ದು 
ಚಿತ್ತಜ ಪಿತನನೇಕ ಚಿತ್ತದಿ ನೆನೆಯದೆ                                ।।೧।।

ಕುಜನರ ಬಳಿವಿಡಿದು ಸುಕರ್ಮವು ಯಜನಾದಿಗಳ ಜರಿದು 
ಭುಜಗಶಯನ ನಿನ್ನ ಭಜನಿಯ ಮಾಡುವ 
ಸುಜನರ ಚರಣಾಂಬುಜವನೆ ಪಿಡಿಯದೆ                             ।।೨।।

ಉದರಭರಣೆಗಾಗಿ ಸರ್ವದಾ ಅಧಮರ ಹಿಂದೆ ತಿರುಗಿ 
ಬುಧರ ಸೇವೆಯು ಮಾಡಿ ಹೃದಯ ಕಮಲದಲ್ಲಿ 
ಪದುಮನಾಭನ ಪಾದ ಮುದದಿ ಧೇನಿಸದೆ                          ।।೩।।

ಜ್ಞಾನವಂತರ ಸಂಗ ಮಂದ ಜ್ಞಾನಿಗೇನೋ ರಂಗ 
ದೀನ ವಾತ್ಸಲ ನೀ ದೀನರಿಗಲ್ಲದಲೇ 
ಹೀನಗುಣದವನಿಗೇನು ಗತಿಯೋ ಕೃಷ್ಣಾ                             ।।೪।।

ಪರಮಪುರುಷ ಹರಿಯೇ ಎನ್ನ ನೀ ಕರಪಿಡಿಯೋ ದೊರಿಯೇ 
ಅರಘಳಿಗ್ಯಾದರೂ ಗುರುಶ್ರೀಶವಿಠ್ಠಲ
ಪರಮ ಪಾವನ ನಿನ್ನ ಚರಣವ ಸ್ಮರಿಸದೆ                             ।।೫।।
*********