ಕಾಖಂಡಕಿ ಶ್ರೀ ಕೃಷ್ಣದಾಸರು
ನೋಡಿ ನೋಡಿ ನಿಮ್ಮೊಳು ಪ
ನೋಡಿ ನೋಡಿ ನಿಮ್ಮೊಳು ನಿಜವಾ ನೋಡಿರ್ಯೋ | ಬ್ಯಾಡಿ ಬ್ಯಾಡಿ ಮೈಯ್ಯ ಮರಿಯ ಬ್ಯಾಡಿರ್ಯೊ | ಮಾಡಿ ಮಾಡಿ ಸ್ವಹಿತವನು ಮಾಡಿರ್ಯೋ | ಪಾಡಿ ಪಾಡಿ ಅಚ್ಚುತನ ನಾಮ ಪಾಡಿರ್ಯೋ 1
ಕೇಳಿ ಕೇಳಿ ಸದ್ಭೋಧವನೆ ಕೇಳಿರ್ಯೋ | ಬಾಳಿ ಬಾಳಿ ಸತ್ಸಂಗದಲಿ ಬಾಳಿರ್ಯೋ | ಕೇಳಿ ಕೇಳಿ ಮದಮತ್ಸರವಾ ಕೇಳಿರ್ಯೋ | ತಾಳಿ ತಾಳಿ ವಿವೇಕ ಗುಣವಾ ತಾಳಿರ್ಯೋ | 2
ಕೂಡಿ ಕೂಡಿ ತಂದೆ ಮಹಿಪತಿ ಕೂಡಿರ್ಯೋ | ನೀಡಿ ನೀಡಿ ತನುಮನಧನ ನೀಡಿರ್ಯೋ | ಬೇಡಿ ಬೇಡಿ ಗತಿ ಮುಕ್ತಿಗಳ ಬೇಡಿರ್ಯೋ | ಮಾಡಿ ಮಾಡಿ ಸಾರ್ಥಕ ಜನ್ಮ ಮಾಡಿರ್ಯೋ 3
****