ಕಾಖಂಡಕಿ ಶ್ರೀ ಕೃಷ್ಣದಾಸರು
ಸಾಧಕರೊಳು ಸಿದ್ಧನು | ಹರಿಪಾದಕಮಲ ಕಾಣಬೇಕೆಂದು ಬಯಸುವವ ಪ
ಭಕ್ತಿಯ ಹಡಗವ ಸಾರಿ ಭವಾಂಬುಧಿ | ಯುಕ್ತಿಲಿ ದಾಟಿ ಮನೋರಥದಾ | ಮುಕ್ತಿಯ ಪಟ್ಟಣದಲ್ಲಿಹ ನಿಜಘನಾ | ಸಕ್ತಿಲಿ ಪಡಕೊಂಡು ಸುಖದಲಿ ಕುಳಿತಾ 1
ಉಣಲಾಡುವಲ್ಲಿ ಸರ್ವ ಅನುಭವದಲಿ ಹರಿ | ನೆನೆಯದೆ ಅರ್ಪಣೆಯಾಗುವದು | ಜನದೊಳು ಅವರವರಂತೆ ಸೋಪಾಧಿಕ | ಯೋಗಿ 2
ಕ್ಷೀರ ನೀರ ಭೇದ ಮಾಡುವ ಹಂಸ ವಿ | ಚಾರದಿ ಸಾರಾಸಾರವ ತಿಳಿದು | ಪ್ರಾರಬ್ಧ ಗತಿಯಲಿ ಸ್ವಾನಂದದಿಂದಿಹ | ಧಾರುಣಿ ಜನರನು ತಾರಿಸುವಾ 3
ಪುಣ್ಯದ ಫಲದಾಶೆಯಾತಕ ಬಾಲಗ | ಹೊನ್ನ ತಾ ಗುಂಬೆಂಬ ತ್ಯರನಂದದಿ | ಪರಿ | ಚೆನ್ನಾಗಿ ತಿಳಿದಿಹ ನಿದ್ವಂದಿಯೋ 4
ಬಲ್ಲವಿಕೆಯ ದೋರಿ ಸೊಲ್ಲಿಗೆ ಬಾರದೆ | ಬೆಲ್ಲಸವಿದ ಮೂಕನಂದದಲಿ | ಪುಲ್ಲನಾಭನು ಇರುವೆಲ್ಲರೊಳಗೆ ನೋಡಿ | ನಿಲ್ಲವ ಗುರು ಮಹಿಪತಿ ಪ್ರಭು ಶರಣಾ 5
***