ಪಾಂಡುರಂಗ ವಿಟ್ಠಲೇಶ್ವರಾ ಪಾಹಿಮಾಂ ರುಕುಮಾಯಿ ಮನೋಹರಾ ll ಪ ll
ಪುಂಡರೀಕ ವರದಾಂತ ಜಗಮನ ಮೃಕಂಡು ಸುತ ಪ್ರಿಯಾಖಂಡ ತೇಜ ll ಅ ಪ ll
ಇಷ್ಟಭಕುತ ಪ್ರೀತಿಯಿಂದ ನಿನಗೆ ಕೊಟ್ಟ
ಇಟ್ಟಿಗೆ ಮೇಲೆ ನೆಲೆಸಿರುವ ದೇವ ll 1 ll
ಮರೆತಾದರು ಸಂಸ್ಮರಿಸುವ ಜನರಘ
ಪರಿಹರಿಸುವೆನೆಂಬ ಬಿರುದು ಕಟ್ಟಿಹ ll 2 ll
ಭೂವಲಯದಿ ನೂತನಾವರಣ ಪುರದಿ
ದೇವ ಗುರುರಾಮ ವಿಟ್ಠಲನೆಲೆಸಿದೆ ll 3 ll
***