Tuesday, 13 April 2021

ಪಾಂಡುರಂಗ ವಿಟ್ಠಲೇಶ್ವರಾ ಪಾಹಿಮಾಂ ankita gururama vittala

 ಪಾಂಡುರಂಗ ವಿಟ್ಠಲೇಶ್ವರಾ ಪಾಹಿಮಾಂ ರುಕುಮಾಯಿ ಮನೋಹರಾ ll ಪ ll


ಪುಂಡರೀಕ ವರದಾಂತ ಜಗಮನ ಮೃಕಂಡು ಸುತ ಪ್ರಿಯಾಖಂಡ ತೇಜ ll ಅ ಪ ll


ಇಷ್ಟಭಕುತ ಪ್ರೀತಿಯಿಂದ ನಿನಗೆ ಕೊಟ್ಟ

ಇಟ್ಟಿಗೆ ಮೇಲೆ ನೆಲೆಸಿರುವ ದೇವ ll 1 ll


ಮರೆತಾದರು ಸಂಸ್ಮರಿಸುವ ಜನರಘ

ಪರಿಹರಿಸುವೆನೆಂಬ ಬಿರುದು ಕಟ್ಟಿಹ ll 2 ll


ಭೂವಲಯದಿ ನೂತನಾವರಣ ಪುರದಿ

ದೇವ ಗುರುರಾಮ ವಿಟ್ಠಲನೆಲೆಸಿದೆ ll 3 ll

***


No comments:

Post a Comment