Showing posts with label ಸುಲಭವಲ್ಲವೊ ಮಹಾನಂದ ತನ್ನೊಳಗೆ ತನ್ನೊಳಗೆ ತಾ purandara vittala SULABHAVALLAVO MAHANANDA TANNOLAGE TA. Show all posts
Showing posts with label ಸುಲಭವಲ್ಲವೊ ಮಹಾನಂದ ತನ್ನೊಳಗೆ ತನ್ನೊಳಗೆ ತಾ purandara vittala SULABHAVALLAVO MAHANANDA TANNOLAGE TA. Show all posts

Thursday 2 December 2021

ಸುಲಭವಲ್ಲವೊ ಮಹಾನಂದ ತನ್ನೊಳಗೆ ತನ್ನೊಳಗೆ ತಾ purandara vittala SULABHAVALLAVO MAHANANDA TANNOLAGE TA



ಪುರಂದರದಾಸರು

ಸುಲಭವಲ್ಲವೊ ಮಹಾನಂದ, ತನ್ನೊಳಗೆ ತಾ
ತಿಳಿಯಬೇಕು ಗುರುದಯದಿಂದ ||ಪ||

ಬೆಕ್ಕನು ಇಲಿ ನುಂಗುವ ತನಕ, ಕಡು
ರಕ್ಕಸಿಯ ಕಂಡು ಗಿಣಿ ನುಂಗುವ ತನಕ
ಮಕ್ಕಳ ಭಕ್ಷಿಸುವ ತನಕ, ಮದ
ಸೊಕ್ಕಿದ ಗಜವನ್ನು ನರಿ ನುಂಗುವ ತನಕ ||

ಇಷ್ಟದೈವತ ವಶವಾಕೋ ತನಕ, ಮೂರು
ಬೆಟ್ಟಗಳನ್ನು ನೊಣ ನುಂಗುವ ತನಕ
ಶಿಷ್ಟರೊಡನೆ ಸೇರುವ ತನಕ, ಗುಬ್ಬಿ
ಕೆಟ್ಟ ರಾಜಹಂಸನ ನುಂಗುವ ತನಕ ||

ಒಳಹೊರಗೊಂದಾಗುವ ತನಕ, ಸಾಲ
ಕಡೆ ಎಂಬುವ ಭಾವ ಬಯಲಾಗುವ ತನಕ
ಬೆಳಕಿನೊಳಗೆ ಕಾಣುವ ತನಕ, ನಮ್ಮ
ಪುರಂದರವಿಠಲನ ದಯವಾಗುವ ತನಕ ||
***

ರಾಗ ನಾದನಾಮಕ್ರಿಯೆ. ಛಾಪು ತಾಳ (AUDIO RAGA MAYBE DIFFERENT)

pallavi

sulabhavallavo mahAnanda tannoLage tA tiLiyabEku guru dayadinta

caraNam 1

bekkanu ili nunguva tanaka kaDu rakkasiya kaNDu giNi nunguva tanaka
makkaLa bhakSisuva tanak mata sokkida gajavannu nari nunguva tanaka

caraNam 2

iSTa daivata vashavAkO tanaka mUru beTTagaLannu noNa nunguva tanaka
shiSTaroDane sEruva tanaka gubbi rAjahamsana nunguva tanaka

caraNam 3

oLa horegondAguva tanaka sAla kaLe embuva bhAva bayalAguva tanaka
beLaginoLage kANuva tanaka namma purandara viTTalana dayavAguva tanaka
***

ಸುಲಭವಲ್ಲವೊ ಮಹಾನಂದ 
ತನ್ನೊಳಗೆ ತಿಳಿಯಬೇಕುಗುರುದಯದಿಂದ ಪ.

ಬೆಕ್ಕನು ಇಲಿ ನುಂಗುವನಕ - ಕಡು -ರಕ್ಕಸಿಯನು ಕಂಡು ಗಿಣಿ ನುಂಗುವನಕ ||ಮಕ್ಕಳ ಭಕ್ಷಿಸುವನಕ - ಮದ -ಸೊಕ್ಕಿದ ಗಜವನು ನರಿ ನುಂಗುವನಕ 1

ಇಬ್ಬರೊಡನೆ ಕೊಡುವನಕ - ಮೂರು -ಹಬ್ಬಿದ ಬೆಟ್ಟವ ನೊಣ ನುಂಗುವನಕ ||ಒಬ್ಬರೊಡನೆ ಸೇರುವನಕ - ಕೆಟ್ಟ -ಗುಬ್ಬಿಯ ರಾಜಹಂಸವು ನುಂಗುವನಕ 2

ಒಳ ಹೊರಗೊಂದಾಗುವನಕ - ತಾನು -ತಿಳಿದೆನೆಂಬಭಾವ ಬಯಲಾಗುವನಕ ||ಬೆಳಕಿನೊಳಗೆ ಕಾಣುವನಕ ನಮ್ಮ -ಚೆಲುವ ಪುರಂದರವಿಠಲನ ದಯವಾಗುವನಕ 3
*********