Showing posts with label ಬಂದು ಭಕ್ತಿಯಲಿಂದ ಇಂದಿರೆ ರಮಣನ madhwesha krishna. Show all posts
Showing posts with label ಬಂದು ಭಕ್ತಿಯಲಿಂದ ಇಂದಿರೆ ರಮಣನ madhwesha krishna. Show all posts

Friday, 27 December 2019

ಬಂದು ಭಕ್ತಿಯಲಿಂದ ಇಂದಿರೆ ರಮಣನ ankita madhwesha krishna

ಬಂದು ಭಕ್ತಿಯಲಿಂದ ಇಂದಿರೆ ರಮಣನ 
ಚರಣಕ್ಕೊಂದನೆ ಮಾಡಿರೋ 
ಸಂದೇಹವಿಲ್ಲದೆ ಸಲಹುವ ತಾನು 
ಸುಂದರಾಂಗನು ಚಂದಿರವದನನು||ಪಲ್ಲ||

ಪಾದದಿ ಪಾಗಡ ಋಳಿ ಗೆಜ್ಜೆಕಟ್ಟಿದ 
ಮೋದಭರಿತನು,ಮೇಧಿನಿಪತಿಯಿವ
ಕಾದು ಕೊಂಡಿಹ ತನ್ನ ಭಕ್ತರ ಸಲಹುವ
ಯಾದವರೊಡೆಯ ಯದುಕುಲ ತಿಲಕ||೧||

ಹರಿದಾಸರನುದಿನ ಹಾಡಿಹೊಗಳುವ
ಪರಮಪಾವನಮೂರ್ತಿಶ್ರೀಹರಿಯ
ಕರಿಯ ಕರೆಗೆ ಬಂದ ಕರುಣಾಮಯನು 
ಕಾರುಣ್ಯ ಮೂರ್ತಿ ಶ್ರೀಕೃಷ್ಣನ \\೨\\

ರಮೆಯರಸನ ಧ್ಯಾನ ಸುಮನಸದಲಿ 
ಮಾಡೆಕಮನೀಯ ಮೂರ್ತಿ ತಾನೊಲಿವ
ಅಮರರಿಂದೊಂದಿತ ಭುವನಾದಿಪತಿಯು
ಆದರದಲಿ ಭಜಿಸೆಅನುಗ್ರಹಿಸುವನು||೩||

ನಿತ್ಯ ತೃಪ್ತನು ತನ್ನಭಕ್ತರ ಸಲಹುವ 
ಸತ್ಯಭಾಮೆಯ ಪತಿ ಸಾರ್ವಭೌಮ
ಅತ್ಯಂತ ವಿನಯದಿ ತೃಪ್ತಿ ಪಡುವನು 
ಭಕ್ತರ ಮಾತಿಗೆ ಕತೃಪತಿಯ||೪||

ಸರ್ವ ಕಾಲಗಳಲ್ಲು ಸರ್ವ  ದೇಶಗಳಲ್ಲು 
ಸನ್ನಿಹಿತನಾಗಿರುವ ಸರ್ವಶಕ್ತ
ಸರುವರ ಆಧಾರಿ ಸರಸಿಜದಳನೇತ್ರ 
ಸರುವರಿಂದೊಂದಿತ ಮಧ್ವೇಶ ಕೃಷ್ಣ ||೫||
********