Showing posts with label ಹರಿಭಜನೆ ಮಾಡು ನೀ ತ್ವರದಿ ತ್ವರದಿ hanumesha vittala. Show all posts
Showing posts with label ಹರಿಭಜನೆ ಮಾಡು ನೀ ತ್ವರದಿ ತ್ವರದಿ hanumesha vittala. Show all posts

Tuesday, 1 June 2021

ಹರಿಭಜನೆ ಮಾಡು ನೀ ತ್ವರದಿ ತ್ವರದಿ ankita hanumesha vittala

ಹರಿ ಭಜನೆ ಮಾಡು ನೀ ತ್ವರದಿ ತ್ವರದಿ ಪ

ಕರವೀರ ಪುರದಿ ತನ್ನರಸಿಯ ಬಿಟ್ಟು ಭಕ್ತರ

ಸಲಹುವ ನಮ್ಮ ಪರಮ ಪಾವನ 1

ವರಧ್ರುವರಾಜನು ನರಹರಿ ಸ್ಮರಿಸಲು

ಕರುಣಿಸ್ಯೆವನ ಹರಿ ಭರದಿ ಪೊರೆದೆ 2

ವನವಾಸದಲಿ ಶ್ರಮ ಅನುಭವಿಸಿದ ಪಾಂಡು

ತನಯರ ಸಲಹಿದ ಹನುಮೇಶವಿಠಲ 3

****