Showing posts with label ಪ್ರಥಮ ದೈವವೇ ಪಂಢರಿರೇಯಾ ಪೃಥ್ವಿಯೊಳಗೆ vijaya vittala. Show all posts
Showing posts with label ಪ್ರಥಮ ದೈವವೇ ಪಂಢರಿರೇಯಾ ಪೃಥ್ವಿಯೊಳಗೆ vijaya vittala. Show all posts

Wednesday, 16 October 2019

ಪ್ರಥಮ ದೈವವೇ ಪಂಢರಿರೇಯಾ ಪೃಥ್ವಿಯೊಳಗೆ ankita vijaya vittala

ವಿಜಯದಾಸ
ಪ್ರಥಮ ದೈವವೇ ಪಂಢರಿರೇಯಾ
ಪೃಥ್ವಿಯೊಳಗೆ ಭಾಗೀರಥಿಗೆ ಪಥವ ಕೋರೊ ಪ

ಸಕಲಭಯನಾಶ ಸಾತ್ವಿಕ ಮೂರುತಿ
ಭಕ್ತಜನಷೋಷಕ ನೀನಲ್ಲವೆ
ತ್ವಕ್ಕು ಇಂದ್ರಿಯಗಳು ನಿನ್ನಾಧೀನವೋ
ಅಖಿಳ ಬಗೆಯಿಂದ ಮಾತು ಮನ್ನಿಸಿ ಕಾಯೊ 1

ಸರ್ವರಂತರಿಯ ಸಿದ್ಧ ಫಲದಾಯಕ
ಸರ್ವರಲಿ ಸ್ವಾಮಿಯೆಂದೆನಿಪ
ಸರ್ವ ವಿಘ್ನೋಪ ಶಾಂತಾ ವೇದಾಂತನೆ
ಗೀರ್ವಾಣ ಮುನಿಸುತ ಗಿರಿಧರ ದೇವಾ 2

ಸಾಧು ಮೂರುತಿ ಸಿದ್ಧ ಫಲದಾ
ಬೋಧ ಕೀರುತಿ ಆದಿಪರಬೊಮ್ಮ
ವಿಜಯವಿಠ್ಠಲರೇಯಾ ನೀನು
ಈ ಜಗದೊಳು ಭೀಮಾ ಕೀರನಿವಾಸಾ 3
*********