Showing posts with label ಕಂಡೆ ನಾ ತಂಡ ತಂಡದ ಹಿಂಡು ಹಿಂಡು ದೈವ ಪ್ರಚಂಡ neleyadikeshava KANDE NAA TANDA TANDADA HINDU HINDU DAIVA PRACHANDA. Show all posts
Showing posts with label ಕಂಡೆ ನಾ ತಂಡ ತಂಡದ ಹಿಂಡು ಹಿಂಡು ದೈವ ಪ್ರಚಂಡ neleyadikeshava KANDE NAA TANDA TANDADA HINDU HINDU DAIVA PRACHANDA. Show all posts

Saturday, 11 December 2021

ಕಂಡೆ ನಾ ತಂಡ ತಂಡದ ಹಿಂಡು ಹಿಂಡು ದೈವ ಪ್ರಚಂಡ ankita neleyadikeshava KANDE NAA TANDA TANDADA HINDU HINDU DAIVA PRACHANDA



ಕಂಡೆ ನಾ ತಂಡ ತಂಡದ ಹಿಂಡು ಹಿಂಡು ದೈವ ಪ್ರಚಂಡ
ರಿಪುಗಂಡ ಉದ್ದಂಡ ನರಸಿಂಹನ ಕಂಡೆನಯ್ಯ ।।ಪ।।

ಗುಡುಗುಡಿಸಿ ಕಂಬದಲಿ ಧಡಧಡ ಸಿಡಿಲು ಸಿಡಿಯೆ
ಕಿಡಿಕಿಡಿಸಿ ಸೆನುಡಿಯ ಡಗಲೊಡನೆ ಮುಡಿ ಪಿಡಿದು
ಘಡ ಘಡನೆ ನಡು ನಡುಗೆ ಗುಡುಗುಡಿಸಿ ಸಭೆ ಬೆದರೆ ।।೧।।

ಹಿಡಿ ಹಿಡಿದು ಹಿರಣ್ಯಕನ ತೊಡೆಯೊಳಿಡೆ ಕೆಡಹಿದನೆ
ಉರದೊಳಪ್ಪಳಿಸಿ ಅರಿಬಸಿರ ಸರಸ ಸೀಳಿ
ಪರಿಪರಿಯಲಿ ಚರ್ಮವೆಳೆದೆಳೆಯಲು
ನರ ನರತನೆ ನೆಗೆದು ನಿರ್ಗಳಿತ ಶೋಣಿತ ಸುರಿಯೆ ।।೨।।

ಹರಿ ಹರಿದು ಕರುಳ ಕೊರಳೊಳಿಟ್ಟವನ
ಪುರಜನರು ಹಾಯೆಂದು ಸುರರು ಹೂ ಮಳೆಗರೆಯೆ
ಹರಿ ಹರಿ ಶರಣೆಂದು ಸ್ತುತಿಸಿ ಶಿಶು ಮೆರೆಯೆ
ಕರುಣಾಳು ಕಾಗಿನೆಲೆ ಆದಿಕೇಶವನ ।।೩।।
***

ಕಂಡೆ ನಾ ತಂಡ ತಂಡದ ಹಿಂಡು ಹಿಂಡು ದೈವ ಪ್ರಚಂಡ
ರಿಪುಗಂಡ ಉದ್ದಂಡ ನರಸಿಂಹನ ಕಂಡೆನಯ್ಯ ।। PA ।।

ಘುಡುಘುಡಿಸಿ ಕಂಬದಲಿ ಧಡಧಡ ಸಿಡಿಲು ಸಿಡಿಯೆ
ಕಿಡಿಕಿಡಿಸೆ ನುಡಿಯಡಗಲೊಡನೆ ಮುಡಿವಿಡಿದು
ಘಡ ಘಡನೆ ನಡು ನಡುಗೆ ಘುಡುಘುಡಿಸಿ ಸಭೆ ಬೆದರೆ
ಹಿಡಿ ಹಿಡಿದು ಹಿರಣ್ಯಕನ ತೊಡೆ ಮೇಲೆ ಕೆಡಹಿದನ ।। 1 ।।

ಉರದೊಳಪ್ಪಳಿಸಿ ಅರಿ ಬಸಿರ ಸರಸರನೆ ಸೀಳಿ
ಪರಿಪರಿಯಲಿ ಚರ್ಮ ಎಳೆದೆಳೆದು ಎಲುಬು
ನರನರವನ್ನು ತೆಗೆದು ನಿರ್ಗಳಿತ ಶೋಣಿತ ಸುರಿಯೆ
ಹರಿಹರಿದು ಕರುಳ ಕೊರಳೊಳಿಟ್ಟವನ || 2 ||

ಪುರಜನರು ಹಾಯೆನಲು ಸುರರು ಹೂಮಳೆಗರೆಯೆ
ತರತರದ ವಾದ್ಯ ಸಂಭ್ರಮಗಳಿಂದ
ಹರಿಹರಿಯೆ ಶರಣೆಂದು ಸ್ತುತಿಸಿ ಶಿಶು ಮೊರೆಯಿಡುವ
ಕರುಣಾಳು ಕಾಗಿನೆಲೆಯಾದಿಕೇಶವನ || 3 ||
***

kaṇḍe nā taṇḍa taṇḍada hiṇḍu hiṇḍu daiva pracaṇḍa ripugaṇḍa uddaṇḍa narasinhana kaṇḍenayya।। PA।।

ghuḍughuḍisi kambadali dhaḍadhaḍa siḍilu siḍiye kiḍikiḍise nuḍiyaḍagaloḍane muḍiviḍidu ghaḍa ghaḍane naḍu naḍuge ghuḍughuḍisi sabhe bedare hiḍi hiḍidu hiraṇyakana toḍe mēle keḍahidana।। 1।।

uradoḷappaḷisi ari basira sarasarane sīḷi paripariyali carma eḷedeḷedu elubu naranaravannu tegedu nirgaḷita śōṇita suriye hariharidu karuḷa koraḷoḷiṭṭavana || 2 ||

purajanaru hāyenalu suraru hūmaḷegareye taratarada vādya sambhramagaḷinda harihariye śaraṇendu stutisi śiśu moreyiḍuva karuṇāḷu kāgineleyādikēśavana || 3 ||

Plain English

kande na tanda tandada hindu hindu daiva pracanda ripuganda uddanda narasinhana kandenayya।। PA।।

ghudughudisi kambadali dhadadhada sidilu sidiye kidikidise nudiyadagalodane mudivididu ghada ghadane nadu naduge ghudughudisi sabhe bedare hidi hididu hiranyakana tode mele kedahidana।। 1।।

uradolappalisi ari basira sarasarane sili paripariyali carma eledeledu elubu naranaravannu tegedu nirgalita sonita suriye hariharidu karula koralolittavana || 2 ||

purajanaru hayenalu suraru humalegareye taratarada vadya sambhramagalinda harihariye saranendu stutisi sisu moreyiduva karunalu kagineleyadikesavana || 3 ||
***

ಕಂಡೆ ನಾ ತಂಡ ತಂಡದ ಹಿಂಡು ಹಿಂಡು ದೈವ ಪ್ರಚಂಡ –
ರಿಪುಗಂಡ ಉದ್ದಂಡ ನರಸಿಂಹನ ಕಂಡೆನಯ್ಯ ||pa||

ಘುಡುಘುಡಿಸಿ ಕಂಬದಲಿ ಧಡಧಡ ಸಿಡಿಲು ಸಿಡಿಯೆ
ಕಿಡಿಕಿಡಿಸೆ ನುಡಿಯಡಗಲೊಡನೆ ಮುಡಿವಿಡಿದು
ಘಡಘಡನೆ ನಡುನಡುಗೆ ಘುಡುಘುಡಿಸಿ ಸಭೆ ಬೆದರೆ
ಹಿಡಿ ಹಿಡಿದು ಹಿರಣ್ಯಕನ ತೊಡೆ ಮೇಲೆ ಕೆಡಹಿದನ||1||

ಉರದೊಳಪ್ಪಳಿಸಿ ಅರಿ ಬಸಿರ ಸರಸರನೆ ಸೀಳಿ
ಪರಿಪರಿಯಲಿ ಚರ್ಮ ಎಳೆದೆಳೆದು ಎಲುಬು
ನರನರವನು ತೆಗೆದು ನಿರ್ಗಳಿತ ಶೋಣಿತ
ಸುರಿಯೆಹರಿಹರಿದು ಕರುಳ ಕೊರಳೊಳಿಟ್ಟವನ||2||

ಪುರಜನರು ಹಾಯೆನಲು ಸುರರು ಹೂಮಳೆ
ಗರೆಯೆತರತರದ ವಾದ್ಯ ಸಂಭ್ರಮಗಳಿಂದ
ಹರಿಹರಿ ಶರಣೆಂದು ಸ್ತುತಿಸಿ ಶಿಶು ಮೊರೆಯಿಡುವ

ಕರುಣಾಳು ಕಾಗಿನೆಲೆಯಾದಿಕೇಶವನ||3||
*********