Showing posts with label ಹುಶ್ಶೂನ್ನ ಬಣ್ಣದ ಹಕ್ಕಿ ನಮ್ಮ ಜಗದೀಶ ರಂಗನ ಒಯ್ದಿರು ಹಕ್ಕಿ purandara vittala. Show all posts
Showing posts with label ಹುಶ್ಶೂನ್ನ ಬಣ್ಣದ ಹಕ್ಕಿ ನಮ್ಮ ಜಗದೀಶ ರಂಗನ ಒಯ್ದಿರು ಹಕ್ಕಿ purandara vittala. Show all posts

Friday 6 December 2019

ಹುಶ್ಶೂನ್ನ ಬಣ್ಣದ ಹಕ್ಕಿ ನಮ್ಮ ಜಗದೀಶ ರಂಗನ ಒಯ್ದಿರು ಹಕ್ಕಿ purandara vittala

ರಾಗ ಪಂತುವರಾಳಿ ಅಟತಾಳ
ಹುಶ್ಶೂನ್ನ ಬಣ್ಣದ ಹಕ್ಕಿ ||ಪ||
ನಮ್ಮ ಜಗದೀಶ ರಂಗನ ಒಯ್ದಿರು ಹಕ್ಕಿ ||ಅ||

ಅರಿಯದ ಶಿಶುವನೆ ಗರಿಯ ಮೇಲಿರಿಸಿ
ಹರಿದಾಡುವರೆ ಆಕಾಶದಲ್ಲಿ
ಮರದ ತುದಿಯ ಮಾವಿನ ಹಣ್ಣ ಸವಿವುತ್ತ
ಮರಳಿ ಮರಳಿ ನೀ ಬಾರಣ್ಣ ಹಕ್ಕಿ ||

ಹಾಳು ಹಾಳಗೊಂಡು ಹಲವು ಬಣ್ಣದ ಹಕ್ಕಿ
ಕಾಲಪೆಂಡೆಯನಿಟ್ಟು ಕಪಟ ಹಕ್ಕಿ
ಬಾಲಕ ಕಂಡರೆ ಅಂಜ್ಯಾನು ಬೆದರ್ಯಾನು
ನಾಳೆ ನೀ ಮೊದಲು ಬಾರದಿರು ಹಕ್ಕಿ ||

ಪಂಕಜನಾಭನ್ನ ಸೇರಿ ಪಾವನವಾದೆ
ಕುಂಕುಮವರ್ಣದ ಹಕ್ಕಿ
ವೆಂಕಟರಮಣ ಪುರಂದರವಿಠಲನ್ನ
***

pallavi

hushyUnna baNNada hakki

anupallavi

namma jagadIsha rangana oidiru hakki

caraNam 1

ariyada shishuvane gariyamElirisi haridADuvare AkAshadalli
marada tudiya mAvina haNNa savuvitta maraLi maraLi nI bAraNNa hakki

caraNam 2

hALu hALkoNdu halavu bNNada hakki kAlapeNDeyaniTTa kapaTa hakki
bAlaka kaNdare ajnyAnu bedaryAnu nALe modalu nI bAradiru hakki

caraNam 3

pankajanAbhanna sEri pAvananAde kumkuma varNada hakki
vEnkaTaramaNa purandara viTalanna manku maruLe bAradiro hakki
***