Showing posts with label ಆರಮಕ್ಕಳಾರ ರಾಣಿ ಆರ ಸಂಪದವಾರಿಜಾಕ್ಷ ankita prasannavenkata AARA MAKKALAARA RAANI AARA SAMPADA VAARIJAAKSHA. Show all posts
Showing posts with label ಆರಮಕ್ಕಳಾರ ರಾಣಿ ಆರ ಸಂಪದವಾರಿಜಾಕ್ಷ ankita prasannavenkata AARA MAKKALAARA RAANI AARA SAMPADA VAARIJAAKSHA. Show all posts

Saturday, 4 December 2021

ಆರಮಕ್ಕಳಾರ ರಾಣಿ ಆರ ಸಂಪದವಾರಿಜಾಕ್ಷ ankita prasannavenkata AARA MAKKALAARA RAANI AARA SAMPADA VAARIJAAKSHA



by ಪ್ರಸನ್ನವೆಂಕಟದಾಸರು
ಆರ ಮಕ್ಕಳಾರ ರಾಣಿ ಆರ ಸಂಪದ
ವಾರಿಜಾಕ್ಷ ನಿಟ್ಟ ತೆರದಿ ಇರು ಎಲೆಲೆ ಆತ್ಮಾ || ಪ ||

ಬೇಡಿದರೆ ಕೊಡ ದೇವ ಬೇಡದಿದ್ದರೀವ ದೇವ
ನೋಡುತಿಹ ಸುಮ್ಮನೆ ತಾನಾಡಿಪ ಜಗವ
ರೂಢಿಯಲ್ಲಿ ಎಳೆ ಮಕ್ಕಳಾಡುವಂತೆ ಕೊಟ್ಟು ಕಳೆದು‌     
ಓಡಿಸಾಡುತಿಹ ಯಂತ್ರಾರೂಢನ ಬಳಗಿದೆಲ್ಲ ||೧ ||

ಕಂದನ್ನಿಟ್ಟು ತಂದೆ ತಾಯಿ ಮುಂದೆ ಕಂದನ
ಹಿಂದೆ ಮುಂದೊಯ್ಯುವನ್ಯಮ ಸಂಬಂಧರಿಗ್ಹೇಳಿ
ಚಂದದಿ ಜಗಜ್ಜೀವರು ದಂದುಗದಿ ತೊಳಲೆ ಕಂಡು
ಮಂದಸ್ಮಿತದೊಳಿಪ್ಪ ಮುಕುಂದನ ಮಾಯವಲ್ಲದೆ || ೨ ||

ಹಾವು ಹಾರವಕ್ಕು ಮೃತ ಜೀವರು ಸಂಜೀವರಕ್ಕು
ಪಾವಕತಂಪಕ್ಕು ವಿಷ ಪೀಯೂಷಮಕ್ಕು
ಆವಕಾಲದಿ ಶ್ರೀ ಪ್ರಸನ್ವೆಂಕಟೇಶನಂಘ್ರಿಯ
ಭಾವದೊಳರ್ಚಿಸು ಕ್ಷುದ್ರ ಜೀವಿಗಳಾಸೆ ಸಲ್ಲ || ೩ ||
***

Ara makkaLAra rANi Ara saMpadavArijAkSha
niTTa teradi iru elele AtmA || pa ||

bEDidare koDa dEva bEDadiddarIva dEva
nODutiha summane tAnADipa jagava
rUDhiyalli eLe makkaLADuvaMte koTTu kaLedu
ODisADutiha yaMtrArUDhana baLagidella ||1 ||

kaMdanniTTu taMde tAyi muMde kaMdana
hiMde muMdoyyuvanyama saMbaMdharig~hELi
caMdadi jagajjIvaru daMdugadi toLale kaMDu
maMdasmitadoLippa mukuMdana mAyavallade || 2 ||

hAvu hAravakku mRuta jIvaru saMjIvarakku
pAvakataMpakku viSha pIyUShamakku
AvakAladi SrI prasanveMkaTESanaMGriya
BAvadoLarcisu kShudra jIvigaLAse salla || 3 ||
***

ಆರ ಮಕ್ಕಳಾರ ರಾಣಿ ಆರ ಸಂಪದವಾರಿಜಾಕ್ಷ
ನಿಟ್ಟ ತೆರದಿ ಇರು ಎಲೆಲೆ ಆತ್ಮಾ ಪ.

ಬೇಡಿದರೆ ಕೊಡ ದೇವ ಬೇಡದಿದ್ದರೀವ 
ದೇವನೋಡುತಿಹ ಸುಮ್ಮನೆ ತಾನಾಡಿಪ 
ಜಗವರೂಢಿಯಲ್ಲಿ ಎಳೆ ಮಕ್ಕಳಾಡುವಂತೆ ಕೊಟ್ಟು 
ಕಳೆದುಓಡಿಸಾಡುತಿಹ ಯಂತ್ರಾರೂಢನ ಬಳಗಿದೆಲ್ಲ 1

ಕಂದನ್ನಿಟ್ಟು ತಂದೆ ತಾಯಿ ತಂದೆ ತಾಯಿ 
ಮುಂದೆ ಕಂದನಹಿಂದೆ ಮುಂದೊಯ್ಯುವನ್ಯಮ 
ಸಂಬಂಧರಿಗ್ಹೇಳಿಚಂದದಿ ಜಗಜ್ಜೀವರು ದಂದುಗದಿ 
ತೊಳಲೆ ಕಂಡುಮಂದಸ್ಮಿತದೊಳಿಪ್ಪ 
ಮುಕುಂದನ ಮಾಯವಲ್ಲದೆ 2

ಹಾವು ಹಾರವಕ್ಕು ಮೃತ ಜೀವರು 
ಸಂಜೀವರಕ್ಕುಪಾವಕತಂಪಕ್ಕು ವಿಷ ಪೀಯೂಷಮಕ್ಕು
ಆವಕಾಲದಿ ಶ್ರೀ ಪ್ರಸನ್ವೆಂಕಟೇಶನಂಘ್ರಿಯ
ಭಾವದೊಳರ್ಚಿಸು ಕ್ಷುದ್ರ ಜೀವಿಗಳಾಸೆ ಸಲ್ಲ 3
*******