Showing posts with label ಎನ್ನಯ ನಾಯಕೀಯ ಸ್ವಾಮಿಯ vasudeva vittala ankita suladi ಪ್ರಾರ್ಥನಾ ಸುಳಾದಿ ENNAYA NAYAKIYA SWAMIYA PRARTHANA SULADI. Show all posts
Showing posts with label ಎನ್ನಯ ನಾಯಕೀಯ ಸ್ವಾಮಿಯ vasudeva vittala ankita suladi ಪ್ರಾರ್ಥನಾ ಸುಳಾದಿ ENNAYA NAYAKIYA SWAMIYA PRARTHANA SULADI. Show all posts

Saturday, 4 September 2021

ಎನ್ನಯ ನಾಯಕೀಯ ಸ್ವಾಮಿಯ vasudeva vittala ankita suladi ಪ್ರಾರ್ಥನಾ ಸುಳಾದಿ ENNAYA NAYAKIYA SWAMIYA PRARTHANA SULADI


 Audio by Mrs. Nandini Sripad

.
ಶ್ರೀವ್ಯಾಸತತ್ವಜ್ಞತೀರ್ಥಾರ್ಯ ವಿರಚಿತ 

 ಪ್ರಾರ್ಥನಾ ಸುಳಾದಿ 

 ರಾಗ ಪೂರ್ವಿಕಲ್ಯಾಣಿ 

 ಧ್ರುವತಾಳ 

ಎನ್ನಯ ನಾಯಕೀಯ ಸ್ವಾಮಿಯ ಕಂಡಂತೆ
ನಿನ್ನ ನೋಡಲಾಯಿತೊ ಪ್ರಾಣಪ್ರಿಯ ದೂತನೆ
ಚನ್ನಾಗಿ ನೋಡೊ ಇವಳ ಪರಿಯನ್ನು
ಬಿನ್ನಪ ಮಾಡುವೆ ಅಪರಾಧಗಳ
ನಿನ್ನಂತ ಘಟಕರ ಇನ್ನೊಬ್ಬರ ಕಾಣೆ
ಮನವಿಟ್ಟು ನೀನೆವೆ ವಾಸುದೇವವಿಟ್ಠಲಂಗೆ 
ಬಿನ್ನೈಸಿ ಕೂಡಿಸೊ ಘನ್ನ ದಯಾನಿಧೆ  ॥ 1 ॥ 

 ಮಟ್ಟತಾಳ 

ಪತಿಯ ಬಳಿಯಲಿದ್ದು ಪತಿಯ ಮನವರಿಯಳೊ
ಅತಿಶಯ ಸುಖವಿತ್ತು ವಿಭವ ತೋರಿಸಲಾಗ
ಮತಿಯಲಿ ಸುಖ ರತಿಯಲಿ ಮನ ಉಬ್ಬಿ ಸ್ಮೃತಿಯನು ಕಳಕೊಂ -
ಡತುಳಜ್ಞವ ಮೀರಿ ಹಿತ ಗೆಳತಿಯ ಮುಂದೆ
ರತಿಯ ಸುಖವ ಪೇಳಿ ಪತಿ  ವಾಸುದೇವವಿಟ್ಠಲ 
ಪತಿತಳು ಇವಳೆಂದು ಅತಿ ವ್ಯವಹಿತನಾದಾ ॥ 2 ॥ 

 ತ್ರಿವಿಡಿತಾಳ 

ಸತಿಯರೊಳಗಿವಳು ಅತಿಮುಗ್ಧ ವಧುವಳು
ಗತ ಅಗತವೊಂದೂ ಮತಿಯಲ್ಲಿ ಅರಿಯಳೊ
ಖತಿಯನ್ನು ತನಗೆ ತಾ ಕೃತಿಸಿ ಕಂಡವರಲಿ
ಅತಿ ಬಾಯಿ ಬಿಡುವಳೊ ಗತಿಯೇನು ಇದಕಿನ್ನು
ರತಿಪತಿಪಿತ ವಾಸುದೇವವಿಟ್ಠಲರೇಯ 
ಹಿತವಾಗುವಂತೆ ಉಪಕೃತಿ ಮಾಡೊ ಹಿತನೆ ॥ 3 ॥ 

 ಅಟ್ಟತಾಳ 

ಧವಬಿಟ್ಟ ವಿರಹದ ಭವಣಿಯಿಂದ ಅವಳಿಗೆ
ನವಗಂಧಗಳೆ ಬಂಧ ಸುವಸ್ತ್ರವೇ ಶಸ್ತ್ರ
ಭವನವೆಂಬೊಂದೆ ಬಲು ಕುವನವಾಗಿವಳಿಗೆ
ನವಚೂತ ಪಲ್ಲವ ಸವಿಧಾವಿ ಪಲ್ಲವ
ವಿವಿಧ ತಾಪಗಳನುಭವಿಸುವ ಇವಳನ್ನು
ಭುವನೇಶ ಶ್ರೀವಾಸುದೇವವಿಟ್ಠಲ ಪಾದ
ಸುವಿಮಲತರ ನಖ ಶಶಿ ಛವಿಯಿಂದ ಪಾಲಿಸೊ
ಪ್ರವಣ ನಾ ಮರಿಯೆನೊ ಭುವನದೊಳಗೆ ನಿನ್ನ ॥ 4 ॥ 

 ಆದಿತಾಳ 

ಅನಲಿ ಬಹುದುವೊಂದು ಅನಲಕ್ಕೆ ಬಾರದು
ಇನಿತಪರಾಧದಿ ದಣಿವದೆ ಸಾಕು ಕನಿಸಿಲಿ ಬೇಡೆಂದು
ಮುನಿಸಿನಲಿ ಹೇಳೆಂಬನು ಬ್ಯಾರಿದ್ದಾನೆ
ಅನುದಿನ ನೀ ಬಲ್ಲಿ 
ವನಜಾಕ್ಷಿಯ ತನುಮನ ಅಸು ಉಳಿಸೆಂದು 
ವಿನಯದಿ ವಾಸುದೇವವಿಟ್ಠಲಗೆ ಪೇಳೊ ॥ 5 ॥ 

 ಜತೆ 

ಒಲಿದು ವಾಸುದೇವವಿಟ್ಠಲನು ಬಾಲಿಗೆ
ಸುಳಿದು ಪೊರೆ ಎಂದು ತಿಳಿಸೋ ಏ ಪ್ರಿಯಾ ॥
***