Showing posts with label ಗುರುರಾಯ ಗುರುರಾಯ ನಿರುತದಿ ನಿನ್ನನು ಸ್ಮರಿಸುವೆ ಶುಭಕಾಯಾ gurujagannatha vittala. Show all posts
Showing posts with label ಗುರುರಾಯ ಗುರುರಾಯ ನಿರುತದಿ ನಿನ್ನನು ಸ್ಮರಿಸುವೆ ಶುಭಕಾಯಾ gurujagannatha vittala. Show all posts

Wednesday, 1 September 2021

ಗುರುರಾಯ ಗುರುರಾಯ ನಿರುತದಿ ನಿನ್ನನು ಸ್ಮರಿಸುವೆ ಶುಭಕಾಯಾ ankita gurujagannatha vittala

 ..

ಗುರುರಾಯ - ಗುರುರಾಯ ಪ

ನಿರುತದಿ ನಿನ್ನನು ಸ್ಮರಿಸುವೆ - ಶುಭಕಾಯಾ ಅ.ಪ

ಕುಧರರದನಜ - ನದಿಯ ತೀರದಿ ನಿಜ

ಸದನನೆ ಹರಿಪದ - ಮಧುಕರ ಸೈ ಸೈ 1

ಮಾಗಧರಿಪು ಮತ ಸಾಗರ ಝಷsÀಸಮಾ -

ಮೋಘ ಮಹಿಮ ಎನ್ನ - ಬ್ಯಾಗನೆ ಪೊರಿಯೈ 2

ಕಾಮಿತ ಫಲಪ್ರದ - ಪ್ರೇಮದಿ ನಿನ್ನಯ

ನಾಮವ ನೆನಿವಂತೆ - ನೇಮವ ಸಲಿಸೈ 3

ಆನತ ಸುಜನ ಸ -ನ್ಮಾನದ ಎನ್ನನು

ಮಾನದಿ ಪಾಲಿಸೊ - ಮಾನಿಜನಪ್ರಿಯ 4

ದಾತಗುರು ಜಗನ್ನಾಥವಿಠಲ ಸಂ -

ಪ್ರೀತಿ ಪಾತ್ರ ನಿಜ - ದೂತನ ಪಾಲಿಸೊ 5

***