Showing posts with label ಎನ್ನ ಮೊರೆಯ ಕೇಳಬಾರದೆ ಹೇ ಶ್ರೀನಿವಾಸ gurujagannatha vittala ENNA MOREYA KELABAARADE HE SRINIVASA. Show all posts
Showing posts with label ಎನ್ನ ಮೊರೆಯ ಕೇಳಬಾರದೆ ಹೇ ಶ್ರೀನಿವಾಸ gurujagannatha vittala ENNA MOREYA KELABAARADE HE SRINIVASA. Show all posts

Thursday 2 December 2021

ಎನ್ನ ಮೊರೆಯ ಕೇಳಬಾರದೆ ಹೇ ಶ್ರೀನಿವಾಸ ankita gurujagannatha vittala ENNA MOREYA KELABAARADE HE SRINIVASA



ಎನ್ನ ಮೊರೆಯ ಕೇಳಬಾರದೆ ಹೇ ಶ್ರೀನಿವಾಸ  ಪ 


ಎನ್ನ ಮೊರೆಯ ಕೇಳದಿರೆ ಎನ್ನನಿವರು ಬದುÀಕಿಸರು ಇನ್ನು ಮಾಡಲೇನು ಎಂದು ನಿನ್ನ ಪದಕೆ ಸಾರಿದೆನು ಅ.ಪ 


ಇಬ್ಬರ್ರಮಣ ನಿನ್ನ ಪಾದ ಉಬ್ಬಿಮನದಿ ಭಜಿಪ ಎನಗೆ ಮಬ್ಬುಗವಿದು ತಾವು ಎನ್ನ ಮೊಬ್ಬಿನೊಳಗೆ ಕೆಡವಿದರೊ 1 


ಅನ್ಯವಾರ್ತೆಬಿಟ್ಟು ನಾನು ನಿನ್ನ ಗುಣವ ಕೇಳ್ವೆನೆನಲು ನಿನ್ನವಾರ್ತೆಬಿಡಿಸಿ ತಾವು ಅನ್ಯವಾರ್ತೆ ಕೇಳಿಸೋರು 2 


ನಿನ್ನ ನಾಮಸ್ತೋತ್ರಗಳು ಮನ್ನದಿಂದ ಪಠಿಪೆನೆನಲು ಎನ್ನ ಮಾತುಸಾಗಗೊಡದೆ ತಮ್ಮ ಮಾತು ಸಾಗಿಸುವರು 3 


ನಿನ್ನ ಪಾದಕಮಲಗಂಧವನ್ನು ಗ್ರಹಿಪೆನೆನಲು ಎನಗೆ ಚೆನ್ನಗಂಧ ಬಿಡಿಸಿ ತಾವು ಘನ್ನದುರ್ಗಂಧ ಕೊಡುವರೋ 4 


ನಿನ್ನಭಜಕರಂಗಸಂಗವನ್ನು ಮಾಳ್ಪೆನೆನಲು ಅದ ನನ್ನು ಬಿಡಿಸಿ ಪರರಾದವನ್ನು ತೇರ ಕೂಡಿಸೋರು 5 


ನಿನ್ನ ಚಕ್ರ ಶಿಲಾಸ್ಪರ್ಶವನ್ನು ಮಾಳ್ಪೆನೆನಲು ಅದ ನನ್ನು ಬಿಡಿಸಿ ನೀಚÀಜನಾರನ್ನು ಸ್ಪರ್ಶಮಾಡಿಸೋರು 6 


ನಿನ್ನ ಮನಿಗೆ ಬರುವ ಎನ್ನ ಚೆÉನ್ನವಾಗಿ ಕರೆದು ತಾವು ಅನ್ಯಮನಿಗೆ ವೈದು ಬಹಳ ಬನ್ನಬಡಿಸುವರಯ್ಯಾ 7 


ಅನ್ಯಮನಿಗೆ ಪೋಗದಲೆ ಎನ್ನ ಮನೆಯ ಒಳಗೆ ನಾನು ಅನ್ನವಸನ ದಿಂದ ಇರಲು ಅನ್ಯಸದನಕೆಳದು ವೈವ 8 


ಕಠಿಣ ಜನರು ಅªರು ಬಹÀಳ ಸಟೆಯುಅಲ್ಲವೆನ್ನ ಮಾತು ಥಟನೆ ಗುರುಜಗನ್ನಾಥವಿಠಲರೇಯ ಲಾಲಿಸೀಗ 9

***