Showing posts with label ಸ್ನಾನವ ಮಾಡಿರೊ ಜ್ನಾನ ತೀರ್ಥದಲ್ಲಿ ನಾನು ನೀನೆಂಬ purandara vittala SNANAVA MAADIRO JNANA TEERTHADALLI NAANU NEENEBA. Show all posts
Showing posts with label ಸ್ನಾನವ ಮಾಡಿರೊ ಜ್ನಾನ ತೀರ್ಥದಲ್ಲಿ ನಾನು ನೀನೆಂಬ purandara vittala SNANAVA MAADIRO JNANA TEERTHADALLI NAANU NEENEBA. Show all posts

Sunday, 5 December 2021

ಸ್ನಾನವ ಮಾಡಿರೊ ಜ್ನಾನ ತೀರ್ಥದಲ್ಲಿ ನಾನು ನೀನೆಂಬ purandara vittala SNANAVA MAADIRO JNANA TEERTHADALLI NAANU NEENEBA


check same pallavi by kanakadasaru

ಸ್ನಾನವ ಮಾಡಿರೊ ಜ್ನಾನ ತೀರ್ಥದಲ್ಲಿ

ನಾನು ನೀನೆಂಬಹಂಕಾರವ ಬಿಟ್ಟು

ತಂದೆ ತಾಯಿಗಳ ಸೇವೆ ಒಂದು ಸ್ನಾನ
ಬಂಧನದವರ ಬಿಡಿಸಲೊಂದು ಸ್ನಾನ
ಮುಂದಣ ಮಾರ್ಗ ತಿಳಿದಡೊಂದು ಸ್ನಾನ
ಇಂದಿರೇಶನ ಧ್ಯಾನವೆ ಗಂಗಾ ಸ್ನಾನ

ಪರಸತಿಯ ಬಯಸದಿದ್ದರೆ ಒಂದು ಸ್ನಾನ
ಪರರ ನಿಂದಿಸದಿರುವುದು ಒಂದು ಸ್ನಾನ
ಪರರೊಡವೆಯಪಹರಿಸದಿರೆ ಒಂದು ಸ್ನಾನ
ಪರತತ್ವ ತಿಳಿದುಕೊಂಡರೆ ಗಂಗಾಸ್ನಾನ

ತನ್ನೊಳು ತಾನೇ ತಿಳಿದರೊಂದು ಸ್ನಾನ
ಅನ್ಯಾಯ ನುಡಿಯದಿದ್ದರೆ ಒಂದು ಸ್ನಾನ
ಅನ್ಯಾಯ ಮಾಡದಿರಲು ಒಂದು ಸ್ನಾನ
ಚೆನ್ನಾಗಿ ಹರಿಯ ನೆನೆಯೆ ಗಂಗಾ ಸ್ನಾನ

ಅತ್ತೆ ಮಾವರ ಸೇವೆಯು ಒಂದು ಸ್ನಾನ
ಭರ್ತನ ಮಾತ ಕೇಳುವುದು ಒಂದು ಸ್ನಾನ
ಕ್ಷೇತ್ರಪಾತ್ರರ ಸಹವಾಸ ಒಂದು ಸ್ನಾನ
ಪಾರ್ಥಸಾರಥಿಧ್ಯಾನವೆ ಗಂಗಾ ಸ್ನಾನ

ವೇದ ಶಾಸ್ತ್ರವನೋದುವುದೊಂದು ಸ್ನಾನ
ಭೇದಾಭೇದವ ತಿಳಿದರೊಂದು ಸ್ನಾನ
ಸಾಧು ಸಜ್ಜನರ ಸಂಗ ಒಂದು ಸ್ನಾನ
ಪುರಂದರವಿಠಲನ ಧ್ಯಾನವೆ ಗಂಗಾ ಸ್ನಾನ
***

ರಾಗ ಪೂರ್ವಿ ಅಟ ತಾಳ (raga, taala may differ in audio)

pallavi

snAnava mADiro jnAna tIrttadalli nAnu nInembahankArava biTTu

caraNam 1

tande tAyigaLa sEve ondu snAna bandhanadavara biDisalondu snAna
mundana mArga tiLidarondu snAna indirEshana dhyAnave gangA snAna

caraNam 2

para satiya bayasadiddare ondu snAna parara nindisadiruvudu ondu snAna
pararoDaveyapaharisadire ondu snAna para tatva tiLidu koNDare gangA snna

caraNam 3

tannoLu tAnE tiLidarondu snAna anyAya nuDiyadiddare ondu snAna
anyAya mDadiralu ondu snAna cennAgi hariya neneya gangA snAna

caraNam 4

atte mAvara sEveyu ondu snAna bhartana mAta kELuvudu ondu snAna
kSEtra pAtrara sahavAsa ondu snAna pArthasArathi dhyAnave gangA snAna

caraNam 5

vEda shAstravanOduvudondu snAna bhEdAbhEdava tiLidarondu snAna
sAdhu sajjanara sanga ondu snAna purandara viTTalana dhyAnave gangA snAna
***

ಸ್ನಾನ ಮಾಡಿರಯ್ಯ ಜ್ಞಾನ ತೀರ್ಥದಲಿ 
ನಾನು ನೀನೆಂಬಹಂಕಾರವ ಬಿಟ್ಟು ಪ.

ತನ್ನೊಳು ತಾನೆ ತಿಳಿದರೊಂದು ಸ್ನಾನಅನ್ಯಾಯಗಾರಿ ಕಳೆದರೊಂದು ಸ್ನಾನಅನ್ಯಾಯವಾಡದಿದ್ದರೊಂದು ಸ್ನಾನಚೆನ್ನಾಗಿ ಹರಿಯ ನೆನೆದರೊಂದು ಸ್ನಾನ 1

ಪರಸತಿಯ ಬಯಸದಿದ್ದರೆ ಒಂದು ಸ್ನಾನಪರನಿಂದೆ ಮಾಡದಿದ್ದರೆ ಒಂದು ಸ್ನಾನಪರದ್ರವ್ಯ ಅಪಹರಿಸದಿರೆ ಒಂದು ಸ್ನಾನಪರತತ್ವತಿಳಿದುಕೊಂಡರೆ ಒಂದು ಸ್ನಾನ2

ತಂದೆತಾಯಿಗಳ ಸೇವೆ ಒಂದು ಸ್ನಾನಮುಂದಿನಮಾರ್ಗ ತಿಳಿದರೊಂದು ಸ್ನಾನಬಂಧನವನು ಬಿಡಿಸಿದರೊಂದು ಸ್ನಾನಸಂಧಿಸಿ ತಿಳಿದುಕೊಂಡರೆ ಸೇತು ಸ್ನಾನ 3

ಅತ್ತೆ ಮಾವನ ಸೇವೆಯೊಂದು ಸ್ನಾನಭರ್ತನ ಮಾತು ಕೇಳುವುದೊಂದು ಸ್ನಾನಕ್ಷೇತ್ರಪಾತ್ರರ ಸಹವಾಸ ಒಂದು ಸ್ನಾನಪಾರ್ಥಸಾರಥಿ ನಿಮ್ಮ ಧ್ಯಾನವೆ ಧ್ಯಾನ 4

ವೇದ ಶಾಸ್ತ್ರಗಳನೋದಿದರೊಂದು ಸ್ನಾನಭೇದಾಭೇದ ತಿಳಿದರೊಂದು ಸ್ನಾನಸಾಧು ಸಜ್ಜನರ ಸಂಗ ಒಂದು ಸ್ನಾನಪುರಂದರವಿಠಲನ ಧ್ಯಾನವೆ ಸ್ನಾನ 5
*********