Showing posts with label ಸಾಕು ಸಾಕಿನ್ನು ಸಂಸಾರ ಸುಖವು ಶ್ರೀಕಾಂತ ನೀ neleyadikeshava SAAKU SAAKINNU SAMSAARA SUKHAVU SRIKAANTA NEE. Show all posts
Showing posts with label ಸಾಕು ಸಾಕಿನ್ನು ಸಂಸಾರ ಸುಖವು ಶ್ರೀಕಾಂತ ನೀ neleyadikeshava SAAKU SAAKINNU SAMSAARA SUKHAVU SRIKAANTA NEE. Show all posts

Wednesday, 1 December 2021

ಸಾಕು ಸಾಕಿನ್ನು ಸಂಸಾರ ಸುಖವು ಶ್ರೀಕಾಂತ ನೀ ankita neleyadikeshava SAAKU SAAKINNU SAMSAARA SUKHAVU SRIKAANTA NEE

sung as purandara vittala ankita


look same/similar song under PURANDARA VITTALA ankita

ಸಾಕು ಸಾಕಿನ್ನು ಸಂಸಾರ ಸುಖವು ಪ


ಶ್ರೀಕಾಂತ ನೀನೊಲಿದು ಕರುಣಿಸೈ ಹರಿಯೆ ಅ


ಉದಿಸಿದುವು ಪಂಚಭೂತಗಳಿಂದ ಓಷಧಿಗಳುಉದಿಸಿದುದು ಓಷಧಿಗಳಿಂದನ್ನವುಉದಿಸಿದುವು ಅನ್ನದಿಂ ಶುಕ್ಲ ಶೋಣಿತವೆರಡುಉದಿಸಿದುವು ಸ್ತ್ರೀ ಪುರುಷರಲ್ಲಿ ಹರಿಯೆ 1


ಸತಿಪುರುಷರೊಂದಾಗಿ ರತಿಕ್ರೀಡೆಗಳ ಮಾಡೆಪತನವಾದಿಂದ್ರಿಯವು ಹೊಲೆರುಧಿರವುಸತಿಯ ಉದರದೊಳೆರಡು ಏಕತ್ರ ಸಂಧಿಸುತಪುತಪುತನೆ ಮಾಸ ಪರಿಯಂತ ಹರಿಯೆ2


ಮಾಸವೆರಡರಲಿ ಶಿರ ಮಾಸ ಮೂರರಲಿ ಅಂಗಮಾಸ ನಾಲ್ಕರಲಿ ಚರ್ಮದ ಹೊದಿಕೆಮಾಸ ಐದಾರರಲಿ ನಖ ರೋಮ ನವರಂಧ್ರಮಾಸ ಏಳರಲಿ ಧಾತು ಹಸಿವು ತೃಷೆಯು 3


ತಿಂಗಳೆಂಟರಲಿ ಪೂರ್ವಾನುಭವ ಕರ್ಮಗಳಗುಂಗಿನಲಿ ನಾನಿಂತು ಭವಭವದೊಳುಅಂಗನೆಯರುದರದಲಿ ಮತ್ತೆಮತ್ತೆ ಬಂದುಭಂಗಪಡೆನೆಂದು ಧ್ಯಾನಿಸುತ ದಿನಗಳೆದೆ 4


ಇನಿತು ಗರ್ಭದೊಳು ನವ ಮಾಸ ಪರಿಯಂತರದಿತನು ಸಿಲುಕಿ ನರಕದಲಿ ಆಯಾಸಗೊಂಡುಘನ ಮರುತ ಯೋಗದಿಂ ನರಳುತಿಲ್ಲಿಗೆ ಬಂದುಜನಿಸುವಲ್ಲಿ ಮೃತಭಾವದಿಂದ ನೊಂದೆನೈ ಹರಿಯೆ 5


ಧರೆಯ ಮೇಲುದಿಸಿ ಬಹು ವಿಷ್ಣು ಮಾಯಕೆ ಸಿಲುಕಿಪರವಶದೊಳಿರಲು ನೀರಡಿಕೆಯಾಗಿಹೊರಳಿ ಗೋಳಿಡುತ ಕಣ್ದೆರೆದು ಹರಿಯನು ಮರೆವದುರಿತ ರೂಪದ ತನುವ ಧರಿಸಲಾರೆ6


ಶಿಶುತನದೊಳಗೆ ಸೊಳ್ಳೆ ನೊಣ ಮುಸುಕಿ ಅತ್ತಾಗಹಸಿದನಿವನೆಂದು ಹಾಲನೆ ಎರೆವರುಹಸಿವು ತೃಷೆಯಿಂದಳಲು ಹಾಡಿ ತೂಗುವರಾಗಪಶು ತೆರದಿ ಶಿಶುತನದೊಳಿರಲಾರೆ ಹರಿಯೆ 7


ನಡೆಯಲರಿಯದ ದುಃಖ ಮನಸಿನಲಿ ಬಯಸಿದುದನುಡಿಯಲರಿಯದ ದುಃಖ ವಿಷಯದಿಂದಅಡಿಯಿಡುತ ಮೆಲ್ಲನೇಳುತ ಬೀಳುತಲಿ ತೊದಲುನುಡಿವ ಬಾಲ್ಯದೊಳಿರಲಾರೆ ಹರಿಯೆ 8


ಬಾಲ್ಯದೊಳು ಕೆಲವು ದಿನ ಬರಿದೆ ಹೋಯಿತು ಹೊತ್ತುಗೋಳಿಡುತ ವಿದ್ಯೆ ಕರ್ಮಗಳ ಕಲಿತುಮೇಲೆ ಯೌವನದ ಉಬ್ಬಿನೊಳು ಮದುವೆಯಾಗಿಬಾಲೆಯರ ಬಯಸಿ ಮರುಳಾದೆ ಹರಿಯೆ9


ಜ್ವರದ ಮೇಲತಿಸಾರ ಬಂದವೊಲು ಯೌವನದಿತರುಣಿಯೊಡನಾಟ ಕೂಟದ ವಿಷಯದಿತರುಣಿ ಸುತರ್ಗನ್ನ ವಸ್ತ್ರಾಭರಣವೆನುತಪರರ ಸೇವೆಯಲಿ ಘಾಡ ನೊಂದೆ ಹರಿಯೆ10


ನೆತ್ತರು ತೊಗಲು ಮೂಳೆ ಮಜ್ಜೆ ಮಾಂಸದ ಹುತ್ತುಜೊತೆಗಿಂದ್ರಿಯಗಳ ರೋಗ ರುಜಿನದಲಿಮತ್ತೆ ಕಾಲನ ಬಾಯ ತುತ್ತಾಗುವ ಕರ್ಮದಕತ್ತಲೆಯೊಳೀ ದೇಹ ಕರಡಾಯಿತು 11


ದಿಟ್ಟತನದಲಿ ಗಳಿಸಿ ತರುವಾಗ ಸತಿಸುತರುಕಟ್ಟಿ ಕಾದಿಹರು, ಮುಪ್ಪಡಿಸಿದಾಗತಟ್ಟನೆ ಬಲು ಕೆಟ್ಟ ನುಡಿಗಳಲಿ ಬೈಯುತ್ತಕಟ್ಟಕಡೆಗೆ ಕಣ್ಣೆತ್ತಿ ನೋಡರೈ ಹರಿಯೆ12


ಕಟ್ಟುನಿಟ್ಟಿನ ಭಾರಿ ಮೂಗುಬ್ಬಸದಿ ನೊಂದುಕಟ್ಟಳೆಯ ದಿನ ತುಂಬಿ ಮೃತವಾಗಲುಕುಟ್ಟಿಕೊಂಡಳಲುತ್ತ ಹೋಯೆಂದು ಬಂಧುಗಳುಮುಟ್ಟರು ಹೆಣನೆಂದು ದೂರವಿಹರು 13


ಸತ್ತ ಹೆಣಕಳಲೇಕೆ ಎಂದು ನೆಂಟರು ಸುಯ್ದುಹೊತ್ತು ಹೋಯಿತೆನ್ನುತ ಕಸಕೆ ಕಡೆಯಾಗಿಹೊತ್ತು ಕೊಂಡಗ್ನಿಯಲಿ ತನುವನಿದ ಬಿಸಡುವರುಮತ್ತೆ ಬುವಿಯಲಿ ಜನಿಸಲಾರೆ ಹರಿಯೆ 14


ಇನ್ನು ಈ ಪರಿಪರಿಯ ಯೋನಿ ಮುಖದಲಿ ಬಂದುಬನ್ನವನು ಪಡಲಾರೆ ಭವಭವದೊಳುಜನನ ಮರಣಾದಿ ಸರ್ವ ಕ್ಲೇಶಗಳ ಪರಿಹರಿಸಿಸನ್ಮತಿಯೊಳಿರಿಸೆನ್ನ ಆದಿಕೇಶವರಾಯ 15

***