ನಿನ್ಹೊರತು ಪೊರೆವವರ ನಾನರಿಯೆ ಹರಿಯೆ |
ಆದಿಯ ಮೊದಲು ನಿನ್ನ ಪಾದವ ನಂಬಿದೆ |
ಭೇದವೆನಿಸದೆ ಮೋದದಾಯಕ | ಆದರದಿಂದಲಿ ಕಾಯೋ
ಸೋದರ ಮಾವನ ವೈರಿ |ಮೇಧಿನಿ ಪತಿಯೇ ನಿನ್ನಾರಾಧನೆ
ಮಾಡಿಸೋ ಹರಿಯೇ…
||ನಿನ್ ಹೊರತು||
ದಾನವಾಂತಕ ನೀನೆ ಗತಿ ಎಂದು ಸ್ವಾನುರಾಗದಿಂ ಧ್ಯಾನ ಮಾಡುವೆ |
ಮಾನ ಅಭಿಮಾನ ನಿನ್ನದು ವೇಣುಗೋಪಾಲ ಕ್ರಷ್ಣ |
ಬಾನು ಕೋಟಿತೇಜ ಎನ್ನ ದೀನನಾಗಿ ಮಡೋ ಹರಿಯೇ….
||ನಿನ್ ಹೊರತು||
ಪಂಕಜಾಕ್ಷ ಮುಕುಂದ ಮಾಧವ ಕಿಂಕರಾಮರ ವಂದ್ಯ ಶ್ರೀಹರಿ |
ಸಂಕಟಗಳನು ನೀ ಬಿಂಕದಿಂ ಪರಿಪಾಲಿಪ |
ಕಂಕಣ ಧರಿಸಿದ ಶ್ರೀ ವೆಂಕಟ ವಿಠ್ಠಲ ಹರಿಯೇ….
||ನಿನ್ ಹೊರತು||
***
Lyrics in English
Ninhoratu porevavara nanariye hariye | adiya modalu ninna padava nambide | bhedavenisade modadayaka | adaradindali kayo sodara mavana vairi | medhini patiye ninnaaradhane madiso hariye ……….. || nin horatu ||
Daanavantaka neene gati endu swanuragadim dhyana maduve | maana abhimana ninnadu venugopala krishna | bhanu koti teja enna deenanagi maado hariye || nin horatu||
Pankajaksha mukunda madhava kinkaramara vandya srihari | sankatagalanu nee binkadim paripalipa | kankana dharisida sri venkata vittala hariye … ||nin horatu ||
***