Showing posts with label ಧ್ಯಾನಿಪರಿಗೆ ಅಪಮಾನ ಮೈದೋರಿತು hanumesha vittala. Show all posts
Showing posts with label ಧ್ಯಾನಿಪರಿಗೆ ಅಪಮಾನ ಮೈದೋರಿತು hanumesha vittala. Show all posts

Tuesday, 1 June 2021

ಧ್ಯಾನಿಪರಿಗೆ ಅಪಮಾನ ಮೈದೋರಿತು ankita hanumesha vittala

ಧ್ಯಾನಿಪರಿಗೆ ಅಪಮಾನ ಮೈದೋರಿತು

ಕೆಡಬ್ಯಾಡೆಲೊ ಪ್ರಾಣಿ ಕೆಡಬ್ಯಾಡಾ ನಮ್ಮ

ಕಡಲಶಯನನ ಭಜನೆ ಬಿಡಬ್ಯಾಡಾ ಪ


ಪರನಿಂದೆ ಮಾಡಿ ಕೆಡಬ್ಯಾಡಾ ನನ್ನ

ಸರಿಯಾರಿಲ್ಲೆಂದು ಮೆರೆಯ ಬ್ಯಾಡಾ

ಪರಹೀನತಾ ಮಾಡಿ ನೀ ಕೆಡಬ್ಯಾಡಾ ಶ್ರೀ

ಹರಿ ಸರ್ವೋತ್ತಮನೆನದೆ ಕೆಡಬ್ಯಾಡಾ 1


ಪರದ್ರವ್ಯವನಪಹರಿಸಲಿ ಬ್ಯಾಡಾ ದಿವ್ಯ

ಪರಸತಿಯರ ಮೋಹಕ್ಕೊಳಗಾಗ ಬ್ಯಾಡಾ

ದುರಿತ ಕಾರ್ಯಕೆ ಮನಕೊಡಬ್ಯಾಡಾ ಒಳ್ಳೆ

ಪರ ಉಪಕಾರ ಮಾಡದೇ ಕೆಡಬ್ಯಾಡಾ 2


ಮಾತಾಪಿತರ ಸೇವೆ ಬಿಡಬ್ಯಾಡಾ ಯಮ

ದೂತರಂದದಿ ಅವರನು ಕಾಡಬ್ಯಾಡಾ

ಕೆಟ್ಟ ಮಾರ್ಗವ ಹಿಡಿದು ಹೋಗಬ್ಯಾಡಾ ನಿನ್ನ

ಸತಿಸಂತರಾಮೋಹಕ್ಕೊಳಗಾಗಬ್ಯಾಡಾ 3


ದುಷ್ಟ ಮಾತುಗಳಾಡಬ್ಯಾಡಾ ನೀನು

ಕಳ್ಳರ ಸಹವಾಸ ಮಾಡಲಿ ಬ್ಯಾಡಾ

ಒಳ್ಳೆತನವ ಬಿಡಬ್ಯಾಡಾ ನಮ್ಮ

ಫುಲ್ಲನಾಭನ ದಾಸನಾಗದಿರಬ್ಯಾಡಾ 4


ಸತ್ಯ ಮಾತಾಡದೇ ಕೆಡಬ್ಯಾಡಾ ಸರ್ವೋತ್ತಮ

ಹನುಮೇಶ ವಿಠಲನ ನಾಮಾ

ನಿತ್ಯ ಭಜಿಸಿ ಪಾದ ಬಿಡಬ್ಯಾಡಾ ಒಳ್ಳೆ

ಉತ್ತಮ ಪದಕೆ ವೈದಿಡುವನೋ ಮೂಢಾ 5

****