ಕಾಖಂಡಕಿ ಶ್ರೀ ಕೃಷ್ಣದಾಸರು
ತಿಳಿಯದು ಆಟಾ ಶ್ರೀಹರಿ ನಿನ್ನಾ| ನಳಿನ ಸಂಭವ ಮೊದಲಾದ ನಿರ್ಜರರಿಗೆ ಪ
ಮೊತ್ತವೆನಿಪ ಕ್ಷೀರ ಸಾಗರ ಮಧ್ಯಲಿ| ಉತ್ತಂಗವಾದ ಶೇಷನ ಮಂಚದ ಮ್ಯಾಲೆ| ಸುತ್ತಸನಕಾದಿ ಭಾಗವತರ ಸಂಗ| ನಿತ್ಯವೆರಸಿ ಕ್ರೀಡಿಸುವದ ಬಿಟ್ಟು| ಮತ್ತೆ ವನದೊಳಾಡುವರೇ ತೃಣಗಳ| ಕಿತ್ತಿ ಹಾಸಿಕೆ ಮಾಡುವರೇ ಕಪಿಸಂಗ ಅತ್ಯಂತ ದಲ್ಹಿಡುರೇ ಕುಬ್ಸಿಯಾ| ವತ್ತಿನೀ ಅಳುವರೇ1
ಗಂಭೀರವಾದ ಸುರವರದಿಂದ ನಾರದ| ತುಂಬುರ ಮಾಳ ಗೀತವ ಕೈಕೊಂಡು| ಕೌಸ್ತುಭ ಮಾಲೆಯ ಹಾಕಿ| ವಾಹನ ಬಿಟ್ಟು| ಕೊಂಬು ಕೊಳನ ನೂದುರೇ ಗುಂಜಿಯಾ ವಣಿ ಬಿಂಬಸರವ ಹಾಕುತೀ ಕಲಿಯಾದಾ| ಕಂಬಳಿ ಯನುರೆ ಪೊದ್ದು ವಸ್ತ್ರದಿ ಮರ| ಸಂಭ್ರಮ ವೇಸರೇ 2
ಸುಜನ ಸಮರ್ಪಿಪ ಊಟವ| ದಯದಿಂದ ಕೈಕೊಂಡು ತೃಪ್ತನಾಗಿ| ಶ್ರೀಯಾ ಕುಚ ಕೊಡಮ್ಯಾಲ ಕರವನಿಟ್ಟು| ಜಯವಿಜಯ ವೆಂಬದ್ವಾರ ಪಾಲರಿರೆ| ಗೋವಲ್ಲರೆಂಜಲ ತಿಂಬುದೇ ಸರಗಹಗ| ಕೈಯ್ಯಲಿಂದ ತೊಳೆವರೇ ಮುದದಿ| ಬಲಿಯ ಬಾಗಿಲ ಕಾವುರೇ ಮಹಿಪತಿ ನಂದನ ಜೀವನ-ನೋ3
***