Showing posts with label ತಪ್ಪೇನು ಮಾಡಿದೆನೋ ಬ್ರಹ್ಮಣ್ಯ ಗುರು narahari P brahmanya teertha stutih. Show all posts
Showing posts with label ತಪ್ಪೇನು ಮಾಡಿದೆನೋ ಬ್ರಹ್ಮಣ್ಯ ಗುರು narahari P brahmanya teertha stutih. Show all posts

Thursday, 5 August 2021

ತಪ್ಪೇನು ಮಾಡಿದೆನೋ ಬ್ರಹ್ಮಣ್ಯ ಗುರು ankita narahari P brahmanya teertha stutih

 ..

kruti by pradyumna teertha ಪ್ರದ್ಯುಮ್ನತೀರ್ಥರು


ತಪ್ಪೇನು ಮಾಡಿದೆನೋ ಬ್ರಹ್ಮಣ್ಯ ಗುರು ಪ


ಅಪ್ಪಾ ನಿನ್ನಯ ಮನಕೊಪ್ಪದೇ ಇಪ್ಪಂಥ ಅ.ಪ


ತಂದೆ ತಾಯಿಯು ನೀನೇ ಬಂಧು ಬಳಗ ನೀನೆ

ಸಂದೇಹವಿಲ್ಲವೋ ಕಂದನೆಂದೆನ್ನದಂಥ1


ಒಂದೂ ತಿಳಿಯದಂಥ ಮಂದಮತಿಯು ನಾನು

ಛಂದದಿಂದಲಿ ಬುದ್ಧಿ ಮುಂದೆ ಹೇಳಾದಂಥ 2

ಸಂದೇಹ ಕಳೆದಿನ್ನ ಬಂಧವಾಗಹ ಅಘ

ವೃಂದ ಕ್ಷಮಿಸಿ ಬೇಗ ಮುಂದೆ ಕರೆಯದಂಥ 3


ದುರುಳರೆಲ್ಲರು ಸೇರಿ ಮರುಳುಗೊಳಿಸಿ ಎನ್ನ

ಕರುಣಸಾಗರ ನಿನ್ನ ಕರುಣ ಪಡೆಯದಂಥÀ 4


ಶಾಂತ ಶ್ರೀ ನರಹರಿ ಪಂಥಾದಿಚರಿಸದೇ

ಭ್ರಾಂತನಾದೆ ಭವ ಕಾಂತಾರ ದಾಟಿಸದಂಥ 5

***