Showing posts with label ನೋಡು ನಿನ್ನೊಳು ನಿನ್ನುಗಮ ಮನವೆ gurumahipati. Show all posts
Showing posts with label ನೋಡು ನಿನ್ನೊಳು ನಿನ್ನುಗಮ ಮನವೆ gurumahipati. Show all posts

Wednesday 1 September 2021

ನೋಡು ನಿನ್ನೊಳು ನಿನ್ನುಗಮ ಮನವೆ ankita gurumahipati

 ನೋಡು ನಿನ್ನೊಳು ನಿನ್ನುಗಮ ಮನವೆ ಪ 


ನೋಡು ಒಡನೆ ಖೂನ ಬಿಡದೆ ಸಾರುತದೆ ನಿಗಮಾ ದೃಢ ಭಾವದಲಿ ಪಡೆದು ಸದ್ಗುರು ದಯ ವಿಡಿದು ಸೆರಗ ಕುಡುವದಿದು ಸುಗಮ 1 

ಉಗಮಸ್ಥಾನದ ಉದ್ಭವ ತಿಳಿಯದೆ ಬಿಗಿದ್ಹೆಮ್ಮಿಲಿಹುದ್ಯಾಕೆ ಬಗೆ ಬಗೆ ಸಾಧನ ಶ್ರಮಗೊಂಡು ಜಗಜಾಲದಿ ಭ್ರಮಿಸುವುದಿದೇಕೆ 2 

ನಿರ್ಮಳ ನಿಶ್ಚಳ ನಿಜಘನವರಿತು ಕರ್ಮ ಬಂಧನವ ಗೆಲಿಯಾ ಮರ್ಮಿಲಿ ಮಹಿಪತಿ ಗುರುಯೋಗಧರ್ಮದಿ ನಿರ್ಮನದಲಿ ನಿಜಗೂಡ ಮನವೇ 3

****