.ರಾಗ: [ದುರ್ಗಾ] ತಾಳ: [ಆದಿ]
ಮಾಂ ಪಾಹಿ ಗುರು ರಾಘವೇಂದ್ರ ಪ
ತುಂಗಾತೀರ ವಿಹಾರ ಭಕ್ತ
ಭೃಂಗ ಸಂಗೀತ ಲೋಲ
ಭಂಗ ಪಡಿಸುತ ದುಷ್ಟಜಾಲ
ರಂಗನೊಲಿಸಿಹ ಪ್ರಹ್ಲಾದರಾಯ ಮಾಂ ಪಾಹಿ 1
ತರ್ಕತಾಂಡವದಿ ಮೆರೆದ ವೀರ ಕು-
ತರ್ಕವಾದಿಗಳ ಗೆಲಿದ ಶೂರ
ಅರ್ಕಸಮ ಭವ್ಯ ತೇಜ
ಶಕ್ತಶ್ರೀವ್ಯಾಸರಾಜ ಮಾಂ ಪಾಹಿ 2
ಪರಿಮಳಾಚಾರ್ಯ ಗುರುವೆ ನಿನ್ನ
ಕರುಣವನೆ ತೋರೆನಗೆ ಸುರಕಲ್ಪತರುವೆ
ಶರಣರ ಪೊರೆವಲ್ಲಿ ತಡವೇಕೊ ಸ್ವಾಮಿ
ಗುರುಶಾಮಸುಂದರನು ನಿನ್ನಂತರ್ಯಾಮಿ 3
***