Showing posts with label ನಂಬಬೇಡ ನಂಬಬೇಡ ನಂಬಲೊಜ್ರ ಕಂಬವಲ್ಲ varaha timmappa. Show all posts
Showing posts with label ನಂಬಬೇಡ ನಂಬಬೇಡ ನಂಬಲೊಜ್ರ ಕಂಬವಲ್ಲ varaha timmappa. Show all posts

Friday, 27 December 2019

ನಂಬಬೇಡ ನಂಬಬೇಡ ನಂಬಲೊಜ್ರ ಕಂಬವಲ್ಲ ankita varaha timmappa

by ನೆಕ್ಕರ ಕೃಷ್ಣದಾಸರು
ರಾಗ ಸೌರಾಷ್ಟ್ರ ಆದಿತಾಳ

ನಂಬಬೇಡ ನಂಬಬೇಡ
ನಂಬಲೊಜ್ರ ಕಂಬವಲ್ಲ ||ಪ||

ತುಂಬಿದ ಅಸ್ಥಿಮಾಂಸ ರಕ್ತ
ಜಂಬುಕನ ಬಾಯ ತುತ್ತ ||ಅ.ಪ||

ಎಂಬತ್ತನಾಲ್ಕು ಲಕ್ಷ
ಕುಂಭದೊಳು ಹೊಕ್ಕು ಬಳಲಿ
ನಂಬಲಾರದೊಂದು ಕ್ಷಣಕೆ
ಅಂಬರಕ್ಕೆ ಹಾರುವದ ||೧||

ಮಲವು ಬದ್ಧವಾದ ತನು
ಮಲೆತು ಇರುವುದೇನು
ಬಲುಹುಗುಂದಿದ ಮೇಲೆ
ಫಲವಿಲ್ಲದರಿಂದ ||೨||

ಮಾಳಿಗೆ ಮನೆಯ ಬಿಟ್ಟು
ಮಾಡಿದ ಓಗರ ಬಿಟ್ಟು
ಜಾಳಿಗೆ ಹೊನ್ನನು ಬಿಟ್ಟು
ಜಾರುವುದು ತನುವ ಬಿಟ್ಟು ||೩||

ಆಸೆಯನ್ನು ನೋಡಿ ಮೃತ್ಯು
ಮೋಸವನ್ನು ಯೋಚಿಸುವುದು
ಸಾಸಿರನಾಮನ ಭಜಿಸಿ
ದಾಸನಾಗು ಅನುದಿನ ||೪||

ಮಡದಿಮಕ್ಕಳು ಇವನ
ಕಡೆಯ ಬಾಗಿಲೊಳಗಿಟ್ಟು
ಒಡವೆವಸ್ತುಗಳನು ನೋಡಿ
ಅಡಗಿಸಿ ಇಡುವರಂತೆ ||೫||

ಈಗಲೋ ಇನ್ನಾವಾಗಲೊ
ಭೋಗದಾಸೆ ತೀರಲೊಂದು
ಹಾಗಗಳಿಗೆ ನಿಲ್ಲದಯ್ಯ
ಈ ಗರುವ ಪರುಮಾತ್ಮ ||೬||

ವಾರಕದಾಭರಣವನ್ನು
ಕೇರಿಯೊಳು ಕೊಂಬುವರಿಲ್ಲ
ವರಾಹ ತಿಮ್ಮಪ್ಪಗಿಟ್ಟು
ವಂದಿಸಿ ಕೈಗಳ ತಟ್ಟು ||೭||
******