Showing posts with label ಸ್ಮರಿಸಿ ಬೇಡುವೆ ಹರಿಯ ಮುರಾರಿಯ ಸ್ಮರ ಕೋಟಿತೇಜನ kamalanabha vittala. Show all posts
Showing posts with label ಸ್ಮರಿಸಿ ಬೇಡುವೆ ಹರಿಯ ಮುರಾರಿಯ ಸ್ಮರ ಕೋಟಿತೇಜನ kamalanabha vittala. Show all posts

Thursday, 5 August 2021

ಸ್ಮರಿಸಿ ಬೇಡುವೆ ಹರಿಯ ಮುರಾರಿಯ ಸ್ಮರ ಕೋಟಿತೇಜನ ankita kamalanabha vittala

 ..

kruti by Nidaguruki Jeevubai


ಸ್ಮರಿಸಿ ಬೇಡುವೆ ಹರಿಯ ಮುರಾರಿಯ

ಸ್ಮರ ಕೋಟಿತೇಜನ ಸುರಮುನಿವಂದ್ಯನ ಪ


ಮನ್ಮಥಕೋಟಿ ಲಾವಣ್ಯರೂಪದಿ ಮೆರೆವ

ಮನ್ಮಥಯ್ಯನ ಪೊಗಳುತ್ತಲಿ

ಚಿನ್ಮಯರೂಪನ ಚಿದ್ರೂಪನಾದನ

ಹೃನ್ಮನದಲಿ ಪಾಡಿಪೊಗಳಿ ಕೊಂಡಾಡುತ ಅ.ಪ


ಮನ್ಮನÀದೊಳು ಸ್ಮರಿಸಿ ಸ್ಮರಿಪ ಭಾಗ್ಯವು

ಮುನ್ನ ಕರುಣಿಸಿ ಸಲಹು ಬಲು ಸಂ-

ಪನ್ನ ನಿನಗೆದುರಿಲ್ಲ ಧರೆಯೊಳು

ಪನ್ನಗಾದ್ರಿ ನಿವಾಸ ಶ್ರೀಶನ1


ವಿಶ್ವವ್ಯಾಪಕ ನೀನೆ ವಿಶ್ವಮೂರುತಿ ನೀನೆ

ವಿಶ್ವಕರ್ತನು ನೀನೆ ವಿಶ್ವ ನೀನೆ ಶ್ರೀ-

ವಿಶ್ವವಸುನಾಮ ಸಂವತ್ಸರದೊಳು ಮೆರೆವ

ವಿಶ್ವಮೂರುತಿ ಶ್ರೀ ಸರ್ವೇಶ್ವರ ನೀನೆಂದು2


ವಿಶ್ವಮಯ ವಿಶ್ವೇಶ ಶ್ರೀಹರಿ

ವಿಶ್ವನಾಮಕ ವಿಮಲ ಸುಖಮಯ

ವಿಶ್ವವನು ಉದರದೊಳು ಧರಿಸಿದ

ವಿಶ್ವವನು ವದನದಲಿ ತೋರ್ದನ 3


ಕಮಲದಳಾಕ್ಷನ ಕಮನೀಯ ರೂಪನ

ಕಮಲ ಸಂಭವನ ಪೆತ್ತಿಹ ಧೀರನ

ಕಮಲಮುಖಿಯ ಕರಕಮಲದಿ ಪೂಜ್ಯನ

ಕಮಲೆಯೊಡಗೂಡುತ ನಲಿವನ 4


ಕಮಲ ಕರದೊಳು ಪಿಡಿದ ಕಮಲೆಯ

ಕಮಲನಾಭನ ಪಿತನೆ ಮುದದೊಳು

ಕಮಲೆಯನು ಕೈಪಿಡಿದು ಮೆರೆಯುವ

ಕಮಲನಾಭವಿಠ್ಠಲನ ಪ್ರತಿದಿನ5

***