Showing posts with label ಯಾಕೆ ಬರವಲ್ಲಿ ಭಕುತನವಸರಕೆ ಬೇಕಿಲ್ಲೆ ಭಕ್ತವತ್ಸಲನೆಂಬ ಬಿರುದೀಗ vijayaramachandra vittala. Show all posts
Showing posts with label ಯಾಕೆ ಬರವಲ್ಲಿ ಭಕುತನವಸರಕೆ ಬೇಕಿಲ್ಲೆ ಭಕ್ತವತ್ಸಲನೆಂಬ ಬಿರುದೀಗ vijayaramachandra vittala. Show all posts

Friday, 6 August 2021

ಯಾಕೆ ಬರವಲ್ಲಿ ಭಕುತನವಸರಕೆ ಬೇಕಿಲ್ಲೆ ಭಕ್ತವತ್ಸಲನೆಂಬ ಬಿರುದೀಗ ankita vijayaramachandra vittala

 ..

Kruti by ವಿಜಯರಾಮಚಂದ್ರ ವಿಠಲ ದಾಸರು mysore kattemane 


ಯಾಕೆ ಬರವಲ್ಲಿ ಭಕುತನವಸರಕೆ ಪ


ಬೇಕಿಲ್ಲೆ ಭಕ್ತವತ್ಸಲನೆಂಬ ಬಿರುದೀಗ ಅ.ಪ


ಸುರಮುನಿ ನುಡಿಕೇಳಿ ನಾರಿ ಸತ್ಯಭಾಮೆ

ಹರಿ ನಿನ್ನ ದಾನಮಾಡೆ

ವರ ವೀಣ ಪುಸ್ತಕ ಹೊರಿಸಿ ಕರೆದೊಯ್ದನೇನೊ 1


ಮಾತೆಯ ಹಂಗಣೆಯ ಮಾತಿಗೆ ಖತಿಗೊಂಡು

ಪೋತ ಧ್ರುವ ಅರಣ್ಯ ಪೋಗೆ

ಪ್ರೀತಿಯಿಂದಲವನ ಕಾಯ ಪೋದ್ಯಾ 2


ಕುರುಪ ಧರ್ಮಾದ್ಯರ ಕರೆಸಿ ಪಗಡೆಯಾಡೆ

ಸರಸಿಜಾಕ್ಷಿಯ ಸೀರೆಯ

ದುರುಳ ಸೆಳೆಯೆ ಕಾಯ ಪೋದ್ಯಾ 3


ಹಿರಣ್ಯಾಕ್ಷನನುಜ ತರಳನ ಬಾಧಿಸೆ

ಥೋರ ಕಂಬದಿ ಒಡೆದು

ನರಮೃಗ ರೂಪನಾಗಿ ಪೋದ್ಯಾ 4


ನೀರಡಿಸಿ ಗಜರಾಜ ಸರೋವರಕೆ ಬರಲು

ಕ್ರೂರ ನಕ್ರ ಪಿಡಿದೆಳೆಯೆ

ಮೊರೆಯಿಡೆ ಕಾಯ ಪೋದ್ಯಾ 5


ವರವೇದ ಶಾಸ್ತ್ರ ತೊರದು ಪರಮ ನೀಚಳ ಕೂಡಿ

ಮರಣ ಕಾಲದಲ್ಲಜಮಿಳ

ನಾರಗನೆಂದು ಕರೆಯೆ ಪೋದ್ಯಾ 6


ಕರುಣಿ ವಿಜಯ ರಾಮಚಂದ್ರವಿಠಲ ಅವರ

ಸರಿ ನಾನಲ್ಲವೊ ತವ

ಚರಣ ಸೇವಕರ ಸೇವಕನೊ 7

***