Showing posts with label ಎಲ್ಲಿರುವನೋ ರಂಗ ಎಂಬ ಸಂಶಯ ಬೇಡ neleyadikeshava ELLIRUVANO RANGA NEMBA SAMSHAYA BEDA. Show all posts
Showing posts with label ಎಲ್ಲಿರುವನೋ ರಂಗ ಎಂಬ ಸಂಶಯ ಬೇಡ neleyadikeshava ELLIRUVANO RANGA NEMBA SAMSHAYA BEDA. Show all posts

Monday, 1 November 2021

ಎಲ್ಲಿರುವನೋ ರಂಗ ಎಂಬ ಸಂಶಯ ಬೇಡ ankita neleyadikeshava ELLIRUVANO RANGA NEMBA SAMSHAYA BEDA

SUNG AS PURANDARA VITTALA ANKITA

CHECK  ANKITA SHOULD BE PURANDARA VITTALA

 ಏಲ್ಲಿರುವನೋ ರಂಗ ಎಂಬ ಸಂಶಯ ಬೇಡ || ಪ ||
ಎಲ್ಲಿ ಭಕ್ತರು ಕರೆಯೆ ಅಲ್ಲಿ ಬಂದೊದಗುವನು|| ಅ ||

ತರಳ ಪ್ರಹ್ಲಾದ ಹರಿ ವಿಶ್ವಮಯನೆಂದು
ಭರದೊದೆಯಲವನಪಿತ ಕೋಪದಿಂದ
ಸ್ಥಿರವಾದೊಡೀ ಕಂಭದಲಿ ತೋರು ತೋರೆನಲು
ಭರದಿಂದ ಬರಲದಕೆ ವೈಕುಂಠ ನೆರೆಮನೆಯೇ ?|| ೧ ||

ಪಾಪಕರ್ಮವ ಮಾಡಿದಜಮಿಳನ ಯಮಭಟರು
ಕೋಪದಿಂದೆಳೆಯುತಿರೆ ಭೀತಿಯಿಂದ
ತಾ ಪುತ್ರನನು ಕರೆಯೆ ಕೇಳಿ ರಕ್ಷಿಸೆ
ಶ್ವೇತದ್ವೀಪವೀ ಧರೆಗೆ ಸಮೀಪದಲ್ಲಿಹುದೇ ?|| ೨ ||

ಕರಿರಾಜನನು ನೆಗಳು ನುಂಗುತಿರೆ ಭಯದಿಂದ
ಮೊರೆಯಿಡಲು ಕೇಳಿ ತ್ವರಿತದಲಿ ಬಂದು
ಕರುಣದಲಿ ಬಂದವನ ಪರಿಹರಿಸೆ ಗಜರಾಜ
ನಿರುವ ಸರಸಿಯು ಅನಂತಾಸನಕೆ ಮುಮ್ಮನೆಯೆ ?|| ೩ ||

ಕುರುಪತಿಯು ದ್ರೌಪದಿಯ ಸೀರೆಯನು ಸೆಳೆಯುತಿರೆ
ತರುಹಿ ಹಾ ಕೃಷ್ಣ ಎಂದೊರೆ(*) ಕೇಳ್ದು
ಭರದಿಂದ ಅಕ್ಷಯಾಂಬರವೀಯೆ ಹಸ್ತಿನಾ
ಪುರಿಗೆ ದ್ವಾರಾವತಿಯು ಕೂಗಳತೆಯೇ ?|| ೪ ||

ಅಣುಹೊತ್ತಿನೊಳೆಲ್ಲ ಪರಿಪೂರ್ಣ ವಿಶ್ವಮಯ
ಗಣನೆಯಿಲ್ಲದ ಮಹಾಮಹಿಮನೆನಿಪ
ಘನ ಕೃಪಾನಿಧಿ ಕಾಗಿನೆಲೆಯಾದಿಕೇಶವನು
ನೆನೆವರು ಮನದೊಳಿಹನೆಂಬ ಬಿರುದುಂಟಾಗಿ|| ೫ ||
*********

ರಾಗ : ಮುಖಾರಿ ತಾಳ: ಝಂಪೆ (raga, taala may differ in audio)

Elliruvano ranga emba samsaya beda ||pa||

Elli Baktaru kareye alli bandodaguvanu ||a.pa||

Tarala prahlada hari visvamayanendu
Baradodeyalavanapita kopadinda
Sthiravadoli kambadali toru torenalu
Baradinda baraladake vaikuntha neremaneye ||1||

Kurupatiyu draupadiya sireyanu seleyutire
Taruni ha krushna endare keldu
Baradimda akshayambaraviye hastina
Purige dvaravatiyu kugalateye ||2||

Anuhottinolella paripurna visvamaya
Gananeyillada mahamahimanenipa
Gana krupanidhi kagineleyadikesavanu
Nenevara manadolihanemba biruduntaagi ||3||
***

ರಾಗ :  ಮುಖಾರಿ  ತಾಳ : ಝಂಪೆ  

ಎಲ್ಲಿರುವನೋ ರಂಗ ಎಂಬ ಸಂಶಯ ಬೇಡ                 ।।ಪ॥

ಎಲ್ಲಿ ಭಕ್ತರು ಕರೆಯೆ ಅಲ್ಲಿ ಬಂದೊದಗುವನು                 ।।ಅ.ಪ॥ 

ತರಳ ಪ್ರಹ್ಲಾದ ಹರಿ ವಿಶ್ವಮಯನೆಂದು
ಭರದೊದೆಯಲವನಪಿತ ಕೋಪದಿಂದ
ಸ್ಥಿರವಾದೊಳಿ ಕಂಭದಲಿ ತೋರು ತೋರೆನಲು
ಭರದಿಂದ ಬರಲದಕೆ ವೈಕುಂಠ ನೆರೆಮನೆಯೇ               ।।೧।।

ಕುರುಪತಿಯು ದ್ರೌಪದಿಯ ಸೀರೆಯನು ಸೆಳೆಯುತಿರೆ
ತರುಣಿ ಹಾ ಕೃಷ್ಣ ಎಂದರೆ ಕೇಳ್ದು
ಭರದಿಂದ ಅಕ್ಷಯಾಂಬರವೀಯೆ ಹಸ್ತಿನಾ
ಪುರಿಗೆ ದ್ವಾರಾವತಿಯು ಕೂಗಳತೆಯೇ                      ।।೨।।

ಅಣುಹೊತ್ತಿನೊಳೆಲ್ಲ ಪರಿಪೂರ್ಣ ವಿಶ್ವಮಯ
ಗಣನೆಯಿಲ್ಲದ ಮಹಾಮಹಿಮನೆನಿಪ
ಘನ ಕೃಪಾನಿಧಿ ಕಾಗಿನೆಲೆಯಾದಿಕೇಶವನು
ನೆನೆವರ ಮನದೊಳಿಹನೆಂಬ ಬಿರುದುಂಟಾಗಿ                 ।।೩।।
*********