Showing posts with label ಕೈಮುಗಿವೆ ಕೈಮುಗಿವೆ ಕೈಮುಗಿವೆನು ಸಖಿ ramesha. Show all posts
Showing posts with label ಕೈಮುಗಿವೆ ಕೈಮುಗಿವೆ ಕೈಮುಗಿವೆನು ಸಖಿ ramesha. Show all posts

Thursday, 26 December 2019

ಕೈಮುಗಿವೆ ಕೈಮುಗಿವೆ ಕೈಮುಗಿವೆನು ಸಖಿ uttaradi mutt parampare ankita ramesha

galagali avvanavaru
ಕೈಮುಗಿವೆ ಕೈಮುಗಿವೆ ಕೈಮುಗಿವೆನು ಸಖಿ
ವೈಭವದಾ ಗುರುಗಳಾ
ಕೈವಲ್ಯನೀಹೊ ನಮ್ಮ ಕವಿಗಳ ಚರಣಕ್ಕೆ |ಪ|

ಮಧ್ವರಾಯರು ಪದ್ಮನಾಭ ನರಹರಿ ತೀರ್ಥ
ಶುದ್ಧ ಮಾಧವಾಕ್ಷೋಭ್ಯರೆ ಸಖಿ |
ಶುದ್ಧಮಾಧವಾಕ್ಷೋಭ್ಯರ ಚರಣವ
ವಿದ್ಯುಕ್ತದಿಂದ ಬಲಗೊಂಬೆ ಸಖಿಯೆ ||1||

ಪ್ರಸಿದ್ಧ ಜಯತೀರ್ಥ ವಿದ್ಯಾಧಿರಾಜ
ಕವೀಂದ್ರಾ ವಾಗೀಶಾ ರಾಮಚಂದ್ರರೆ ಸಖಿಯೆ |
ವಾಗೀಶಾ ರಾಮಚಂದ್ರ ವಿದ್ಯಾನಿಧಿಗಳ
ಪಾದಪದ್ಮ ಮೊದಲ ಬಲಗೊಂಬೆ ಸಖಿಯೆ ||2||

ರಘುನಾಥ ರಘುವರ್ಯ ರಘೂತ್ತಮತೀರ್ಥರಾ
ವೇದವ್ಯಾಸಾ ವಿದ್ಯಾಧೀಶರೆ ಗೆಲಿಸಲಿ ಸಖಿಯೆ |
ವೇದವ್ಯಾಸಾ ವಿದ್ಯಾಧೀಶರ ಚರಣವ
ಮೋದದಿ ಮೊದಲೆ ಬಲಗೊಂಬೆ ಸಖಿಯೆ || 3||

ಅಗಣಿತ ವೇದ ನಿಧಿ ಸತ್ಯವೃತ ತೀರ್ಥರಾ
ಸತ್ಯನಿಧಿ ಸತ್ಯನಾಥರ ಸಖಿಯೆ |
ಸತ್ಯನಿಧಿ ಸತ್ಯನಾಥರ ಚರಣವ
ಅತ್ಯಂತವಾಗಿ ಬಲಗೊಂಬೆ ಸಖಿಯೆ ||4||

ಸತ್ಯಾಭಿನವ ತೀರ್ಥಾ ಸತ್ಯಪೂರ್ಣತೀರ್ಥರಾ
ಸತ್ಯವಿಜಯ ಸತ್ಯಪ್ರಿಯ ತೀರ್ಥರಾ ಸಖಿಯೆ |
ಸತ್ಯವಿಜಯ ಸತ್ಯಪ್ರಿಯ ತೀರ್ಥರಾ ಚರಣವಾ
ಅತ್ಯಂತವಾಗಿ ಬಲಗೊಂಬೆ ಸಖಿಯೆ ||5||

ಸತ್ಯಭೋದ ಸತ್ಯ ಸಂಧ ಸತ್ಯವರ್ಯರ
ಚಿತ್ತಶುದ್ಧಿಯಲಿ ಬಲಗೊಂಬೆ ಸಖಿಯೆ,|
ಚಿತ್ತಶುದ್ಧಿಯಲಿ ಬಲಗೊಂಬೆ ಸಭೆಯೊಳು
ಸತ್ಯವಾಕ್ಯಗಳಾ ನುಡಿಸಲಿ ಸಖಿಯೆ ||6||

ಯತಿ ಮುನಿರಾಯರಾ ಅತಿಭಕ್ತರಾಗಿದ್ದ
ಗತಿಪ್ರದರಾದ ಗುರುಗಳಾ ಸಖಿಯೆ |
ಗತಿಪ್ರದರಾದ ಗುರುಗಳಾ ‘ರಮೇಶಾ’ನ
ಅತಿ ಭಕ್ತರಾ ಮೊದಲೆ ಬಲಗೊಂಬೆ ಸಖಿಯೆ|| 7||
*******