Showing posts with label ಪಾಲಿಸು ಸೌಭಾಗ್ಯದ ಲಕ್ಷ್ಮೀದೇವಿ ಮೇಲಾದ ಕರವೀರವಾಸಿನಿ ದೇವಿ gadugina veeranarayana. Show all posts
Showing posts with label ಪಾಲಿಸು ಸೌಭಾಗ್ಯದ ಲಕ್ಷ್ಮೀದೇವಿ ಮೇಲಾದ ಕರವೀರವಾಸಿನಿ ದೇವಿ gadugina veeranarayana. Show all posts

Wednesday, 1 September 2021

ಪಾಲಿಸು ಸೌಭಾಗ್ಯದ ಲಕ್ಷ್ಮೀದೇವಿ ಮೇಲಾದ ಕರವೀರವಾಸಿನಿ ದೇವಿ ankita gadugina veeranarayana

 ..

kruti by ವೀರನಾರಾಯಣ Veeranarayana 


ಪಾಲಿಸು ಸೌಭಾಗ್ಯದ ಲಕ್ಷ್ಮೀದೇವಿ ಮೇಲಾದ ಕರವೀರವಾಸಿನಿ ದೇವಿ ಪ


ಬಡಬಡಿಸಿ ಬಂದಿಹೆ ನಾನಿಲ್ಲಿನೋಡಿಕೊಡುವಿ ವರವೆಂದು ಆಸೆಯ ಮಾಡಿಬಿಡಬೇಡ ಮಗನನು ಕರುಣದಿ ನೋಡಿಕೊಡು ನೀ ವರನನು ಸಿರಿಗಳ ನೀಡಿ 1


ಬಡತನದ ಭೂತವ ಎದುರಿಸುವುದು ತಾಯೆತಡೆಯಲಾರೆನು ಇನ್ನು ಕರುಣಿಸಿ ಕಾಯೆಬಿಡದೆ ಭಜಿಪೆ ನಿನ್ನ ಹೇ ಶುಭಕಾಯೆಕೊಡು ನೀ ವರವನು ಧನಗಳನೀಯೆ 2


ಇಡುವೆ ತಲೆಯ ನಿನ್ನ ಪದದಿ ಪನ್ನಗ ವೇಣಿನುಡಿಯೆ ಹರಕೆಗಳ ಹೇ ಶುಭವಾಣಿಒಡೆಯ ಗದಗುವೀರ ನಾರಾಯಣನ ಜಾಣಿಕೊಡು ನೀ ವರವನು ವಿಠಲನ ರಾಣಿ 3

***