Showing posts with label ವಂದನೆ ಮಾಡಿರೈಗುರುವರದೇಂದ್ರರ ಪಾಡಿರೈ pranesha vittala. Show all posts
Showing posts with label ವಂದನೆ ಮಾಡಿರೈಗುರುವರದೇಂದ್ರರ ಪಾಡಿರೈ pranesha vittala. Show all posts

Saturday, 16 November 2019

ವಂದನೆ ಮಾಡಿರೈಗುರುವರದೇಂದ್ರರ ಪಾಡಿರೈ ankita pranesha vittala

by ಪ್ರಾಣೇಶದಾಸರು
ವಂದನೆ ಮಾಡಿರೈಗುರುವರದೇಂದ್ರರ ಪಾಡಿರೈ ಪ

ಬಂದ ದುರಿತಗಳ ಹಿಂದೆ ಮಾಡಿ ಸುಖ |ತಂದುಕೊಡುವ ದಯಾಸಿಂಧುಯತೀಂದ್ರರ ಅ.ಪ.

ಮರುತ ಮತಾಂಬುಧಿ ಸೋಮನೆನಿಪ ವಸುಧೇಂದ್ರ - ಸದ್ಗಣಸಾಂದ್ರ|ಗುರುಗಳಕರಕಮಲದಿ ಜನಿಸಿದ ಸುಕುಮಾರಾ - ಕುಜನ ಕುಠಾರಾ ||ನೆರೆನಂಬಿದ ಭಕುತರನನುದಿನದಲಿ ಪೊರೆವಾ - ದುರಿತವ ತರಿವಾ |ಧರೆಯೊಳು ತ್ಯಾಗದಿ ಕರ್ಣನ ಮರೆಸಿದ ನೋಡಿ - ವರಗಳ ಬೇಡಿ1

ಕರಿಹಿಂಡೊಳುಹರಿಹೊಕ್ಕ ತೆರದಿ ವಾದಿಗಳ - ಕೀಳು ಮತಗಳ |ವರಶಾಸ್ತ್ರಗಳಲಿ ಗೆಲಿದು ಸುಬುದ್ಧಿಯ ವರದ - ಜಗದೊಳು ಮೆರೆದ ||ಶರಭಂಗವರದಚರಣಸರಸೀರುಹಭೃಂಗ- ವಿಷಯ ಅಸಂಗ |ಸ್ಮರಣೆಯ ಮಾಡೆ ಪಿಶಾಚ ರೋಗಗಳ ಭಯವೂ - ಮುಟ್ಟದಲಿಹವೂ 2

ಸಾನುರಾಗದಲಿ ಶ್ರೀ ರಾಘವೇಂದ್ರರ ಸ್ತೋತ್ರ - ಮಾಳ್ಪ ಸುಪಾತ್ರ |ಜಾನಕಿಪತಿ ಆನಂದದೊಳಿವರಿಗೆ ಒಲಿವ - ಹೃದಯದಿ ಸುಳಿವ ||ದೀನ ದಯಾಳು ಅಪರಿಮಿತ ಮಹಿಮ ಗುಣಾಢ್ಯ - ವಾದದಿ ದಾಢ್ರ್ಯಾ |ಧ್ಯಾನಿಸೆ ಮನದೊಳು ಜ್ಞಾನ ಕೀರ್ತಿ ಸುಖ ಕೊಡುವ - ಅಘಗಳ ಕಡಿವ 3

ವಿಷ್ಣುನ ಲೋಕ ಪ್ರವೇಶ ಮಾಡಿದ ಚರಿಯಾ - ಕೇಳಿರಿ ಪರಿಯಾ |ಶಿಷ್ಟ ಜನರು ವಿಶ್ವಾವಸು ನಾಮಕ ಅಬ್ದ - ಆಷಾಢ ಶುದ್ಧ ||ಷಷ್ಠಿಯು ಕುಜವಾಸರ ಉತ್ತರಾ ನಕ್ಷತ್ರಾ -ವರಪುಣ್ಯಕ್ಷೇತ್ರ |ನಟ್ಟ ನಡುವೆ ವೃಂದಾವನ ಮಧ್ಯದೊಳಿರುವಾ - ಸೌಖ್ಯವ ಸುರಿವಾ 4

ಆನೆ ಹಂಡೆ ವಸನಗಳು ದ್ರವ್ಯವು ನಾನಾ - ಮಾಡಿದ ದಾನಾ |ಆ ನಗರದಿ ಬಹು ಮಂದಿಯು ಭಕುತಿಯಲಿಂದಾ - ಪೂಜಿಪ ಚಂದ ||ಸೂನುಪಡೆದು ಸುಖ ಪಡುವರು ಸರ್ವರುನಿತ್ಯ- ಈತನು ಸತ್ಯ |ನಾನೆಂತುಸಿರಲಿ ಪ್ರಾಣೇಶ ವಿಠಲನ ದಾಸಾ, ಮುನಿ ಉತ್ತಂಸಾ 5
*******