Showing posts with label ಎಲ್ಯಾಡಿ ಓಡಿ ಬಂದ್ಯೋ ಗೋವಿಂದ purandara vittala. Show all posts
Showing posts with label ಎಲ್ಯಾಡಿ ಓಡಿ ಬಂದ್ಯೋ ಗೋವಿಂದ purandara vittala. Show all posts

Wednesday, 4 December 2019

ಎಲ್ಯಾಡಿ ಓಡಿ ಬಂದ್ಯೋ ಗೋವಿಂದ purandara vittala

ರಾಗ ತೋಡಿ ಛಾಪುತಾಳ

ಎಲ್ಲ್ಯಾಡಿ ಓಡಿ ಬಂದ್ಯೋ ಗೋವಿಂದ ||ಪ||
ಚೆಲುವ ಫುಲ್ಲಲೋಚನ ಮದನ ಗೋಪಾಲಕೃಷ್ಣ ||ಅ||

ಆಡಿ ಬಂದ್ಯೊ ಮಕ್ಕಳೊಡನೆ ಕೈಲಿ ಚೆಂಡು
ಬೇಡ ಬಂದ್ಯೊ , ದುಷ್ಕೃತದ ಬಂಧನ ಭವ
ದೂಡ ಬಂದ್ಯೊ , ಭಕ್ತಜನಕೆ ಅಭಯಹಸ್ತ
ನೀಡಬಂದ್ಯೊ , ನಿನ್ನ ಎಳೆ ಉಗುರು ಮುಖಕಾಂತಿ ಬಾಡಿದವು ಕೃಷ್ಣ ||

ತುಳಿದು ಬಂದ್ಯೊ ವಿಷದ ಕಾಳಿಂಗನಾಗನ
ಇಳುಹಿ ಬಂದ್ಯೊ ತಾಳಮರಂಗಳನಂಬಿನಲ್ಲಿ
ಕಳುಹಿ ಬಂದ್ಯೊ ಬಾಣಮುಖದಿಂದ ವಾಲಿಯ
ತಿಳಿದು ಬಂದ್ಯೊ ಮುನೀಶ್ವರರ ನಿನ್ನ ಜಡೆಯ ಆಭರಣ ಸಡಲಿದುವು ಕೃಷ್ಣ ||

ಉಂಡು ಬಂದ್ಯೊ ಮಕ್ಕಳೊಡನೆ ಕೈಲಿ ಬುತ್ತಿ
ಕೊಂಡು ಬಂದ್ಯೊ ಮಲ್ಲ ರಕ್ಕಸರ ಮಸ್ತಕ
ಚೆಂಡಾಡಿ ಬಂದ್ಯೊ ಪೂತನಿಯ ಕಾಯುವನು
ಪುಂಡರೀಕಾಕ್ಷ ಪೇಳೆನಗೆ ಈ ಭಂಡತನ ಬೇಡ ಪುರಂದರವಿಠಲ ||
*********