..
kruti by ಮಹಾನಿಧಿವಿಠಲರು mahanidhi vittalaru
ಯದುರ್ಯಾರು ನಿಲ್ಲುವರೋ ಹನುಮರಾಯಾ ನಿನಗೆದುರ್ಯಾರು
ನಿಲ್ಲುವರಯ್ಯಾ ಈ ಜಗತ್ರಯದಿ ಪ
ಮದನ ಶರಾರ್ಬತ [?] ಕದನ ಕರ್ಕಶ ಧೀರಮಣಿಯೇ ಅ.ಪ.
ಜನನಿಯ ಜಠರದಿ ಜನಿಸಿದಾಗಲೆ ದಿವಮಂಡಲಕೆ ಹಾರಿದೆ
ದನುಜಾಂತಕ ರಾಘವನ ಸೇವೆ ಮನದಣಿಯೆ
ಮಾಡಿ ದುರಂಧರನೆನಿಸಿದೆ 1
ದುರುಳ ದುಶ್ಶಾಸನನ ರಕುತವ ಹೀರಿ ಕರುಳು ಬಗೆವಾಗ
ಧುರದಲಿ ಅಷ್ಟು ವೀರರಿದ್ದು ಬಿಡಿಸಿಕೊಳ್ಳಲಾರದೆ
ಮಾರಿ ತಗ್ಗಿಸಿ ಕೆಲಸಾರಿದರಲ್ಲದೆ 2
ಗುರುಮಧ್ವರಾಯಾ ದ್ವೈತವನು ಸಿದ್ಧಾಂತವ
ಮಾಡಿ ಅದ್ವೈತ ಮತವ ಗೆದ್ದು
ಮಾನಿಧಿವಿಠಲನ ಸೂಸಿ ಪೂಜಿಸಿ ಮೆರೆದೆಯಾ
ಮದ್ಗುರು ಮುನಿಮೌನಿರಾಮಾ 3
***