Showing posts with label ಇದೇನಿದೇನು ನಿನ್ನ ಪದವ ನಂಬಿದವ ಗೆಡರು ಬಾಧಿಸು ವದೇನು gurumahipati. Show all posts
Showing posts with label ಇದೇನಿದೇನು ನಿನ್ನ ಪದವ ನಂಬಿದವ ಗೆಡರು ಬಾಧಿಸು ವದೇನು gurumahipati. Show all posts

Thursday, 2 September 2021

ಇದೇನಿದೇನು ನಿನ್ನ ಪದವ ನಂಬಿದವ ಗೆಡರು ಬಾಧಿಸು ವದೇನು ankita gurumahipati

 ಕಾಖಂಡಕಿ ಶ್ರೀ ಕೃಷ್ಣದಾಸರು


ಇದೇನಿದೇನು ನಿನ್ನ ಪದವ ನಂಬಿದವ ಗೆಡರು ಬಾಧಿಸು ವದೇನು ಪ 

ಅವನ ಬದಿಯಲಿ ಗರುಡ ಮಣಿಯಿರೆ| ಹಾವಿನ ಗರಳವ ಏರುವದೇ| ಅಮೃತ ಕಲಶ ಮನೆಯೊಳಿರೆ| ಸಾವಿನ ಭಯದಿಂಬಳಲುವರೇ ರಂಗಯ್ಯಾ 1 
ಹನುಮನ ಪರಿಚಾರಕರಿಗೆ ಬೆಂಬತ್ತಿ ಬಿನಗು ಭೊತಂಗಳು ತಟ್ಟುವವೇ ಅನಳನ ಹೊರಿಯಲಿ ಕುಳಿತಿರೆ ಹಿಮದಿಂದ ತನುಗುಗ್ಗರಿಸಿ ಬಿದ್ದು ಎರಗುವ ದೇನಯ್ಯಾ 2 
ದುರಿತ ಬಂದು| ಕುಂದ ನಿನಗಲ್ಲವೇ ಎನ್ನವ ಗುಣಗಳ ನೋಡದೆ ರಕ್ಷಿಸು ಸನ್ನುತ ಮಹಿಪತಿ ನಂದನ ಜೀವನ 3
***