ಕಾಖಂಡಕಿ ಶ್ರೀ ಕೃಷ್ಣದಾಸರು
ಇದೇನಿದೇನು ನಿನ್ನ ಪದವ ನಂಬಿದವ ಗೆಡರು ಬಾಧಿಸು ವದೇನು ಪ
ಅವನ ಬದಿಯಲಿ ಗರುಡ ಮಣಿಯಿರೆ| ಹಾವಿನ ಗರಳವ ಏರುವದೇ| ಅಮೃತ ಕಲಶ ಮನೆಯೊಳಿರೆ| ಸಾವಿನ ಭಯದಿಂಬಳಲುವರೇ ರಂಗಯ್ಯಾ 1
ಹನುಮನ ಪರಿಚಾರಕರಿಗೆ ಬೆಂಬತ್ತಿ ಬಿನಗು ಭೊತಂಗಳು ತಟ್ಟುವವೇ ಅನಳನ ಹೊರಿಯಲಿ ಕುಳಿತಿರೆ ಹಿಮದಿಂದ ತನುಗುಗ್ಗರಿಸಿ ಬಿದ್ದು ಎರಗುವ ದೇನಯ್ಯಾ 2
ದುರಿತ ಬಂದು| ಕುಂದ ನಿನಗಲ್ಲವೇ ಎನ್ನವ ಗುಣಗಳ ನೋಡದೆ ರಕ್ಷಿಸು ಸನ್ನುತ ಮಹಿಪತಿ ನಂದನ ಜೀವನ 3
***
No comments:
Post a Comment