Showing posts with label ದೇಶಾಧಿಪತಿ ನರಹರಿಯೆ ನಿನ್ನಯ ಪಾದ ದಾಸರ ದಾಸ neleyadikeshava DESHAADHIPATI NARAHARIYE NINNEYA PAADA DAASARA DASA. Show all posts
Showing posts with label ದೇಶಾಧಿಪತಿ ನರಹರಿಯೆ ನಿನ್ನಯ ಪಾದ ದಾಸರ ದಾಸ neleyadikeshava DESHAADHIPATI NARAHARIYE NINNEYA PAADA DAASARA DASA. Show all posts

Wednesday, 10 November 2021

ದೇಶಾಧಿಪತಿ ನರಹರಿಯೆ ನಿನ್ನಯ ಪಾದ ದಾಸರ ದಾಸ ankita neleyadikeshava DESHAADHIPATI NARAHARIYE NINNEYA PAADA DAASARA DASA

 


ದೇಶಾಧಿಪತಿ ನರಹರಿಯೆ ನಿನ್ನಯ ಪಾದದಾಸರ ದಾಸನೆಂದೆನಿಸಬೇಕೆನ್ನ ಪ


ರಜತಮೋಗುಣ ಪ್ರವರ್ತಕ ಮೂಲಾಂತರದಿಂಯಜಮಾನತನದಹಂಕಾರವನು ಒಲ್ಲೆಭುಜ ಚಕ್ರ ಧರಿಸಿ ಸಾತ್ತ್ವಿಕರ ಪಾದಾಂಬುಜರಜ ಭಜಕರ ಭಜಕನೆಂದೆನಿಸೆನ್ನ1


ಸಿರಿಗಂಧ ಕುಂಕುಮ ಸಾದು ಜವ್ವಾಜಿ ಕ-ಸ್ತೂರಿ ತಿಲಕವನಿಡುವುದ ನಾನೊಲ್ಲೆಸಿರಿ ಊಧ್ರ್ವಪುಂಡ್ರ ದ್ವಾದಶನಾಮವಿಡುವವರಪರಿಚಾರಕರ ಪರಿಚಾರಕನೆನಿಸೆನ್ನ 2


ಸ್ವಾದು ಕಲ್ಪಿತವಾದ ಭಕ್ಷ್ಯ ಭೋಜ್ಯಗಳನುಆದರದ ಅಮೃತಾನ್ನ ಉಣುವುದನೊಲ್ಲೆಬೋಧೆಯನು ಹೇಳುವ ಕೇಳುವ ಹರಿದಾಸರಪಾದತೀರ್ಥ ಪ್ರಸಾದವನುಣಿಸೆನ್ನ3


ಕಾಲ ಕರ್ಮದೊಳುಪೇಕ್ಷೆಯ ಮಾಡಿ ಹರಿಭಕುತಿಶೀಲರಹಿತ ಬ್ರಾಹ್ಮಣನಾಗಲೊಲ್ಲೆಕೀಲನರಿತು ಹರಿಭಕುತಿಯನು ಮಾಳ್ಪ ಪರಚಾಂ-ಡಾಲನ ಮನೆ ಬಾಗಿಲ ಕಾಯಿಸೆನ್ನ 4


ಕ್ರೂರಶಾಸ್ತ್ರವನೋದಿ ಕುರಿ ಕೋಣವನೆ ಕಡಿದುಘೋರ ನರಕದಿ ಬೀಳುವುದನು ನಾನೊಲ್ಲೆವಾರಿಜಾಕ್ಷ ನಿನ್ನ ಚರಣ ಸೇವಕರ ಮನೆಯದ್ವಾರಪಾಲಕನೆಂದೆನಿಸೆನ್ನ 5


ಪಟ್ಟೆಪಟ್ಟಾವಳಿ ದಿವ್ಯ ದುಕೂಲ ಮಿಂ-ಚಿಟ್ಟ ವಸ್ತ್ರ ಉಡುವುದನೊಲ್ಲೆನೆಟ್ಟನೆ ಕಾವಿ ಕಾಷಾಯಾಂಬರಗಳನುಉಟ್ಟವರ ಬಂಟನೆಂದೆನಿಸೆನ್ನ 6


ಅರ್ಥ ವಿಷಯಂಗಳ ಫಲಾಪೇಕ್ಷೆಯಿಂ ಪುಣ್ಯತೀರ್ಥಯಾತ್ರೆಯ ಮಾಡಲೊಲ್ಲೆದೈತ್ಯ ಮರ್ದನ ಬಾಡದಾದಿಕೇಶವ ನಿನ್ನಕೀರ್ತನಗೈವರ ಸ್ತುತಿಕನೆನಿಸೆನ್ನ 7

***