Showing posts with label ಇಂದು ಕಂಡೆನು ಹರಿಯ ಭವಹಾರಿಯ ಇಂದು ಕಂಡೆನು ಕಂಬದಿಂದಲಿ lakshmikanta. Show all posts
Showing posts with label ಇಂದು ಕಂಡೆನು ಹರಿಯ ಭವಹಾರಿಯ ಇಂದು ಕಂಡೆನು ಕಂಬದಿಂದಲಿ lakshmikanta. Show all posts

Sunday 1 August 2021

ಇಂದು ಕಂಡೆನು ಹರಿಯ ಭವಹಾರಿಯ ಇಂದು ಕಂಡೆನು ಕಂಬದಿಂದಲಿ ankita lakshmikanta

 ..

kruti by ಲಕ್ಷ್ಮೀನಾರಯಣರಾಯರು Lakshminarayanaru 


ಇಂದು ಕಂಡೆನು ಹರಿಯ | ಭವಹಾರಿಯ

ಇಂದು ಕಂಡೆನು ಕಂಬದಿಂದಲಿ ಪ


ಬಂದು ದೈತ್ಯನ ಕೊಂದು ಕಂದನಿ-

ಗಂದು ಒಲಿದಾನಂದ ಸಾಂದ್ರನ

ಇಂದಿರಾ ಮಂದಿರನ ವಂದ್ಯನ ಅ.ಪ.


ಎಂದಿನಂದದಿ ಬರುತ | ಮನದಲಿ ಶ್ರೀ ಮು-

ಕುಂದ ನಾಮವ ನೆನೆಯುತ

ಮುಂದು ಮುಂದಕೆ ನಡೆಯುತ | ಆ-

ನಂದದಿ ಹೋಗುತಲಿರೆ

ಸುಂದರಿ ಶ್ರೀ ತುಲಸಿಗೊಲಿದು

ಬೃಂದೆಯನು ಕರವಿಡಿದು ಪೊಳೆದು

ಬಂದು ಗಂಡಕಿಯಿಂದ ಭಕ್ತರ

ವೃಂದ ಪೊರೆಯಲು ಪಥದಿ ನಿಂದನ1

***