ರಾಗ: ಸಾವೇರಿ ತಾಳ: ಆದಿ
ಗುರು ರಾಘವೇಂದ್ರ ನಿನಗೆ ಧರಣಿಮಂಡಲದೊಳಗೆ
ಸರಿಗಾಣೆ ಸರಿಗಾಣೆನೊ ಪ
ಕರೆಯಲು ಒಮ್ಮೆ ನೀ ತಡಮಾಡದೆ ಬಂದಿ
ಕರುಣದಿ ನಿನ್ನ ದಿವ್ಯಮೂರುತಿ ತೋರಿದಿ ಅ.ಪ
ತುಂಗವಾದ ತುಂಗಾತೀರದಿ ಶೋಭಿಪ
ಮಂಗಳಪ್ರದನೆ ಮಂಗಳಾಕಾರ
ರಂಗನಪ್ರೀಯನೆ ಅಂತರಂಗದಿ ಬಂದು ನೀ
ಗಂಗೆಯ ಕೊಡಲು ಆಗ ನೀ ಒಪ್ಪಿದಿ
ಹಿಂಗದೆ ಎನ್ನೊಡ ತಡಮಾಡದೆ ನೀ
ಸಂಗಡವಿದ್ಹರಿಶೇಷವ ಭುಂಜಿಸಿ
ಸಂಕಟಪಡುವಂಥ ಕಂದಗೆಸೂಚಿಸಿ
ಕಂಗೆಡದಂತೆ ಮಾಡಿ ಗಂಗೆಗೆಪೋದೆಯೊ 1
ಎನ್ನಲಿ ಕರುಣಿಸಿ ನಿನ್ನ ಧ್ಯಾನವ ಎನಗೆ ಕೊಡಿಸಿ
ಎನ್ನನು ಪಾವನ್ನಮಾಡಿ ನಾ ಧನ್ಯನಾಗುವಂತೆ ಮಾಡಿ
ಘನ್ನ ಶ್ರೀಸುಧೀಂದ್ರಕರವರಪುತ್ರನೆ
ಮನ್ನಿಸಿ ಪೊರೆದೆಯೊ ಭಕ್ತಪ್ರಹ್ಲಾದನೆ
ಎನ್ನಪರಾಧವ ನೋಡದೆ ಲಾಲಿಸಿ
ಎನ್ನನು ಕರುಣಕಟಾಕ್ಷದಿ ವೀಕ್ಷಿಸಿ
ಇನ್ನಿರು ಎನ್ನಂತರಂಗದಿ ಎಂದೆಂದು
ನಿನ್ಹೊರತನ್ಯರ ಪೊರೆವರ ನಾ ಕಾಣೆ 2
ಧರೆಯೊಳು ಮೆರೆಯುವ ಸುಜನರರಕ್ಷಕ ನೀನು
ತರತರವರಗಳ ಕರೆದುಕೊಡುವೆಯೊ
ಶರಣರಪೊರೆವಂಥ ಕರುಣಾಸಾಗರ ನೀನು
ಶರಣೆಂಬೆ ನಿನಗಯ್ಯ ನಿನ್ನ ಪಾದಯುಗಳಕೈಯ್ಯ
ಎರಡೊಂದುಗುಣದಲಿ ರಜತಮಬಿಟ್ಟನೆ
ಎರಡೆರಡೈದು ಭಕುತಿಲಿ ನಿರತನೆ
ಮರುತನಮತದೊಳು ನಿರುತದಿಶೋಭಿಪ
ಧೊರೆ ತಂದೆಪುರಂದರವಿಠಲನದೂತನೆ 3
****