Showing posts with label ಪಾಲ್ಗಡಲೊಡೆಯ ಬಾರೋ ಮೇಲೆ ಕರುಣಾಮೃತ hayavadana. Show all posts
Showing posts with label ಪಾಲ್ಗಡಲೊಡೆಯ ಬಾರೋ ಮೇಲೆ ಕರುಣಾಮೃತ hayavadana. Show all posts

Friday 13 December 2019

ಪಾಲ್ಗಡಲೊಡೆಯ ಬಾರೋ ಮೇಲೆ ಕರುಣಾಮೃತ ankita hayavadana

ಪಾಲ್ಗಡಲೊಡೆಯ ಬಾರೋ/ಮೇಲೆ ಕರುಣಾಮೃತ
ರಸವಸುರಿಸುತಲಿ//

ಬಾರಯ್ಯ ಕೃಷ್ಣ ಬಾರೈ ಬಾಹದಿದ್ದಡೆ
ಕಾರುಣ್ಯ ನಿಧಿ ಯೆಂಬ ಕಥೆಯ ಅ--
ದಾರು ಬಣ್ಣಿಪರು ವೇದಾಂತದೇವಿಯರೆಮ್ಮ
ದೂರುವರೀಗೆ/

ಕುಂಜರ ವರದ ನೀಲಾಂಜನವರ್ಣ ನೀ
ಕಂಜನೇತ್ರನೇ ಕಾಮನಯ್ಯ
ಮಂಜುಳಮೂರ್ತಿ ಮನೋಹರಕೀರ್ತಿ ಪ್ರ--
ಭಂಜನನೊಡೆಯ ಬಾರೋ//೨//.

ಮಂಧರಗಂಧದ ಮಂದಮಾರುತ ಬಂದ
ಚಂದಿರ ಮುಡಿದ ಚದುರ ಬಂದ
ಕಂದರ್ಪನರವಿಂದನೆಂಬ ಕಣೆಯ ತೊಟ್ಟ
ಮಂದರಧರನೇ ಬಾರೋ/

ನೋಡುವೆ ನುಡಿಸುವೆ ಪಾಡುವ ಬಯಕೆಯ
ಬೇಡುವೆ ಹಯವದನನ
ಮಾಡುವೆ ಪೂಜೆಯ ಕೂಡುವೆ ನಿನ್ನೊಡ--
ನಾಡುವೆನೊ ಬೇಗನೆ ಕಾಡದೆ ಬೇಗ ಬಾರೊ//
*****


ಸುಪ್ರಭಾತ ಮಾಲಿಕೆಯಲ್ಲಿ ಶುಭ ದಿನ ಶುಭ ವಾರದಂದು ಶ್ರೀ ವಾದಿರಾಜರು ರಚಿಸಿದ ಶ್ರೀ ಕೃಷ್ಣ ಸ್ತುತಿ.

ಒಮ್ಮೆ ಉಡುಪಿ ಯಲ್ಲಿ ಶ್ರೀ ಕೃಷ್ಣನಿಗೆ ಲಕ್ಷದೀಪೋತ್ಸವ
ನಡೆದಿತ್ತು.

ಎಲ್ಲಾ ಏರ್ಪಾಡು ಗಳು ಬಹಳ ಮುತುವರ್ಜಿ ಯಿಂದ ನಡೆದಿತ್ತು.

ಸಾವಿರಾರು ಭಕ್ತರು ಶ್ರೀ ಕೃಷ್ಣನ ದರ್ಶನ ಕ್ಕೆ ಮತ್ತು ಸೇವೆಗೆ ನೆರೆದಿದ್ದರು.

ಅಲಂಕೃತ ವಾದ ರಥ ವೈಭವದಿಂದ ಹೊರಟಿತ್ತು.
ನಗಾರಿ, ವಾದ್ಯಗಳು, ಗಾಯಕರು,ಭಜನೆಯವರು ಭಜನೆ ಮಾಡುತ್ತಾ ,ಮಂಗಳವಾದ್ಯಗಳನ್ನು ನುಡಿಸುತ್ತಾ
ಭಕ್ತಾದಿಗಳು ಗಳು ಬರುತ್ತಿದ್ದರು.

ಶ್ರೀ ವಾದಿರಾಜರು ಸಹಾ ಉತ್ಸವದಲ್ಲಿ ಭಾಗಿಗಳಾಗಿ
ಶ್ರೀ ಕೃಷ್ಣನ ಸ್ಮರಣೆ ಯಲ್ಲೀ ತಲ್ಲೀನರಾಗಿದ್ದರು.

ಆಗ ಇದ್ದಕ್ಕಿದ್ದಂತೆ ಆಕಾಶದಲ್ಲಿ ಮೋಡಗಳು ಕವಿದು ಭಾರೀ ಮಳೆಯೇ ಬಂದು, ಉತ್ಸವಕ್ಕೆ ಭಂಗವುಂಟಾಗಿ
ಅಲ್ಲಿ ನೆರೆದಿದ್ದ ಭಕ್ತಾದಿಗಳು ಶ್ರೀ ವಾದಿರಾಜರಿಗೆ ಮೊರೆ ಹೊಕ್ಕರು.

ವಾದಿರಾಜರು ಆಗ ನಿಶ್ಚಲ ಮನಸ್ಸಿನಿಂದ
ಶ್ರೀ ಕೃಷ್ಣನನ್ನು ಸ್ಮರಿಸುತ್ತಾ ಸ್ತೋತ್ರ ವನ್ನು ಮಾಡಿದರು.

ಪಾಲ್ಗಡಲೊಡೆಯ ಬಾರೋ/ಮೇಲೆ ಕರುಣಾಮೃತ
ರಸವಸುರಿಸುತಲಿ//

ಎಂದು ಕೃಷ್ಣ ನ ನ್ನು ಕುರಿತು ಸ್ತೋತ್ರ ಮಾಡಿದಾಗ
ಕೂಡಲೇ ಉತ್ಸವದಲ್ಲಿದ್ದ, ಶ್ರೀ ಕೃಷ್ಣನ ರಥವನ್ನು ಬಿಟ್ಟು
ಮಳೆ ಯು ಸುತ್ತ ಮುತ್ತ ಬೀಳಲಾರಂಭಿಸಿತು.


ಅಲ್ಲಿ ನೆರೆದಿದ್ದ ಭಕ್ತಾದಿಗಳು ಶ್ರೀ ವಾದಿರಾಜರ ಮಹಿಮೆ ಗೆ ಆಶ್ಚರ್ಯ ಪಟ್ಟು ಅವರನ್ನು ಕೊಂಡಾಡಿದರು.
*****