Showing posts with label ಮಂಗಳಮಹಿಮ ಶುಭಾಂಗಗ ಮಂಗಳ ಅಂಗಜ ಜನಕ gurumahipati. Show all posts
Showing posts with label ಮಂಗಳಮಹಿಮ ಶುಭಾಂಗಗ ಮಂಗಳ ಅಂಗಜ ಜನಕ gurumahipati. Show all posts

Wednesday, 1 September 2021

ಮಂಗಳಮಹಿಮ ಶುಭಾಂಗಗ ಮಂಗಳ ಅಂಗಜ ಜನಕ ankita gurumahipati

 ಕಾಖಂಡಕಿ ಶ್ರೀ ಕೃಷ್ಣದಾಸರು


ಮಂಗಳ ಮಹಿಮ ಶುಭಾಂಗಗ ಮಂಗಳ ಅಂಗಜ ಜನಕ ಶ್ರೀರಂಗಗ ಮಂಗಳ ಪ 


ಸಿರಿದೇವಿ ಮುಖಪದ್ಮ ಭಂಗಗ ಮಂಗಳ ಸುರ ಮುನಿಜನ ರಂಗ ಸಂಗಗ ಮಂಗಳ ಶರಣಾಗತರ ಭವಭಂಗಗ ಮಂಗಳ ದುರಿತಾಳಿವ್ಯಾಳ ವಿಹಂಗಗ ಮಂಗಳ 1 

ಯಾದವ ಕುಲಾಂಬುದಿ ಚಂದ್ರಗ ಮಂಗಳ ಕೈಟಭಾರಿ ಮಹೀಂದ್ರಗ ಮಂಗಳ ವಿಧಿಭವ ವಂದ್ಯ ನಾದುಪೇಂದ್ರಗ ಮಂಗಳ ಸದಮಲಸದ್ಗುಣಸಾಂದ್ರಗ ಮಂಗಳ 2 

ನಾರದಗಾಯನ ಪ್ರೇಮಿಗೆ ಮಂಗಳ ಸುರಸಾದಾಸಾಸಿರ ನಾಮಿಗೆ ಮಂಗಳ ಗುರುವರ ಮಹಿಪತಿಸ್ವಾಮಿಗೆ ಮಂಗಳ ಕರುಣಾಳು ಜಗದಂತ್ರಯಾಮಿಗೆ ಮಂಗಳ 3

****