Showing posts with label ವೃಂದಾವನಗಳಿಗೆ ಆನಮಿಪೆ ನಿತ್ಯಾನಂದ ankita jagannatha vittala ನವ ವೃಂದಾವನ ಯತಿ ಸ್ತುತಿ nava vrundavana yati stutih. Show all posts
Showing posts with label ವೃಂದಾವನಗಳಿಗೆ ಆನಮಿಪೆ ನಿತ್ಯಾನಂದ ankita jagannatha vittala ನವ ವೃಂದಾವನ ಯತಿ ಸ್ತುತಿ nava vrundavana yati stutih. Show all posts

Monday, 2 August 2021

ವೃಂದಾವನಗಳಿಗೆ ಆನಮಿಪೆ ನಿತ್ಯಾನಂದ ankita jagannatha vittala ನವ ವೃಂದಾವನ ಯತಿ ಸ್ತುತಿ nava vrundavana yati stutih

100% doubt exists- 

*Anyway those who believe in Rayara Mutt please sing the first one, others sing the second one. ಆದರೆ, ಕೇಳಲು ಇಂಪಾಗಿರಲಿ ಅಷ್ಟೇ. ಶ್ರುತಿಬದ್ಧವಾಗಿ ಹಾಡಿರಿ. 😀😀


FIRST ONE 

 ರಾಗ : ಕಾಂಬೋಧಿ  ತಾಳ : ಝಂಪೆ

ವೃಂದಾವನಗಳಿಗೆ -

ಆನಮಿಪೆ ನಿತ್ಯಾ ।

ನಂದತೀರ್ಥರ ಮಧ್ವ-

ಮತೋದ್ಧಾರರೆನಿಪರ । ನವ ।। ಪಲ್ಲವಿ ।।


ವರ ಮಧ್ವಮುನಿ ವಿಮಲ -

ಕರಪದ್ಮ ಸಂಜಾತ ।

ಗುರು ಪದ್ಮನಾಭ ಜಯ-

ಮುನಿ* ಕವೀಂದ್ರ । ತತ್ಕ ।

ರೋರುಹ ಜಾತ 

ವಾಗೀಶತೀರ್ಥ ಮುನಿ ।

ವಾರಿಯ ಗೋವಿಂದಾಖ್ಯ-

ರೊಡೆಯರ ಪವಿತ್ರ ತಮ  ।। ಚರಣ ।।


ವ್ಯಾಸರಾಯರ ಶ್ರೀನಿವಾಸ-

ಮುನಿ ರಾಮಮುನಿ ।

ಶ್ರೀ ಸುರೇಂದ್ರ ಪೌತ್ರರ-

ಸುಧೀಂದ್ರರ ।

ಭೂಸುರರು ಇವರ -

ಸಂತೋಷದಲಿ ಸ್ಮರಿಸಿ । ನಿ ।

ರ್ದೋಷರನು ಮಾಡಿ -

ಅಭಿಲಾಷೆ ಪೂರೈಸುವರ ।। ಚರಣ ।।


ದೇವತೆಗಳು ಇವರು -

ಸಂದೇಹ ಬಡಸಲ್ಲ । ಮಿ ।

ಥ್ಯಾವಾದಿಗಳ ಪರಾಭವ ಮಾಡಿ ।

ಈ ವಸುಂಧರೆಯೊಳಗೆ -

ಕೀರ್ತಿಯುತರಾಗಿ । ಲ ।

ಕ್ಷ್ಮೀವರ ಜಗನ್ನಾಥ-

ವಿಠ್ಠಲನ ಐದಿಹರು ।। ಚರಣ ।।

***


SECOND ONE

೧೯೯೨ರ ಮೈಸೂರು ವಿಶ್ವವಿದ್ಯಾಲಯದ ಪಾಠ


ವೃಂದಾವನಗಳಿಗೆ ಆನಮಿಪೆ ನಿತ್ಯಾ- 

ನಂದತೀರ್ಥರ ಮತೋದ್ಧಾರಕರೆನಿಪ ನವ |

ವರ ಮಧ್ವಮುನಿ ವಿಮಲಕರ ಪದ್ಮ ಸಂಜಾತ

ಗುರು ಪದ್ಮನಾಭ ರಾಮರ ಕವೀಂದ್ರ ತತ್

ಕರ ಸರೋರುಹ ಜಾತ ವಾಗೀಶಮುನಿ ರಘು-

ವರ್ಯ ಗೋವಿಂದಾಖ್ಯ ಒಡೆಯರ ಪವಿತ್ರತಮ |


ಶ್ರೀ ಸುಧೀಂದ್ರಾರ್ಯರ ಪ್ರಪುತ್ರರೆನಿಪ ಸುಧೀಂದ್ರ

ವ್ಯಾಸರಾಯ ಶ್ರೀನಿವಾಸ ಮುನಿಯಾ

ಭೂಸುರರು ಪರಮ ಸಂತೋಷದಲಿ ಸ್ಮರಿಸೆ ನಿ-

ರ್ದೋಷರನೆ ಮಾಡಿ ಅಭಿಲಾಷೆ ಪೂರೈಸುತಿಹ |


ದೇವತೆಗು ಇವರು  ಸಂದೇಹ ಬಡೆ ಸಲ್ಲ, ಮಿ-

ಥ್ಯಾವಾದಿಗಳ ಪರಾಭವ ಮಾಡಿ

ಈ ವಸುಂಧರೆಯೊಳಗೆ ಕೀರ್ತಿಯುತರಾಗಿ, ಲ-

ಕ್ಷ್ಮೀವರ ಜಗನ್ನಾಥವಿಠಲನ ಐದಿಹರ |

****



ನವ ವೃಂದಾವನದ ಯತಿಗಳು  

ಶ್ರೀ ಪದ್ಮನಾಭತೀರ್ಥರು (1324); ಶ್ರೀ ಜಯತೀರ್ಥರು (1388) as per Rayara Mutt / ರಘುವರ್ಯ  ತೀರ್ಥರು (1557) as per Uttaradi Mutt and other mutts; ಶ್ರೀ ಕವೀಂದ್ರತೀರ್ಥರು (1398); ಶ್ರೀ ವಾಗೀಶತೀರ್ಥರು (1406); ಶ್ರೀ ಗೋವಿಂದ ಒಡೆಯರು (1534); ಶ್ರೀ ವ್ಯಾಸರಾಜ ಗುರುಸಾರ್ವಭೌಮರು  (1539); ಶ್ರೀ ಶ್ರೀನಿವಾಸತೀರ್ಥರು (1564); ಶ್ರೀ ರಾಮತೀರ್ಥರು (1584); and ಶ್ರೀ ಸುಧೀಂದ್ರತೀರ್ಥರು (1623);

ಶ್ರೀ ಸುರೇಂದ್ರ ಪೌತ್ರರ ಸುಧೀಂದ್ರರ - ಅಂದರೆ.....ಶ್ರೀ ಸುರೇಂದ್ರತೀರ್ಥರ ಪುತ್ರ  ಶ್ರೀ ವಿಜಯೀಂದ್ರತೀರ್ಥರು - ಶ್ರೀ ವಿಜಯೀಂದ್ರತೀರ್ಥರ ಪುತ್ರ ಶ್ರೀ ಸುಧೀಂದ್ರತೀರ್ಥರು! 

ಆದುದರಿಂದ ಶ್ರೀ ಸುಧೀಂದ್ರತೀರ್ಥರು ಶ್ರೀ ಸುರೇಂದ್ರತೀರ್ಥರಿಗೆ ಪೌತ್ರರು!

ಇಲ್ಲಿ ನೆಲೆಸಿದ ನವ ಯತಿಗಳು ದೇವತೆಗಳು. 

ಪರವಾದಿಗಳನ್ನು ಜಯಿಸಿ ದ್ವೈತ ಮತದ ವಿಜಯ ಪತಾಕೆಯನ್ನು ಹಾರಿಸಿ - ಆಚಂದ್ರಾರ್ಕವಾದ ಕೀರ್ತಿಯನ್ನು ಗಳಿಸಿ - ಲಕ್ಷ್ಮೀಪತಿಯೂ - ಜಗನ್ನಾಥನೂ ಆದ ಶ್ರೀ ಹರಿಯನ್ನು ಹೊಂದಿದರು ( ಐದಿಹರು) ಎಂದು ಪರಿಶುದ್ಧವಾದ ಅರ್ಥ.

****