..
ಕಂಡು ಮನ ಹಿಗ್ಗೋದು ರಂಗಯ್ಯನ ಕೊಂಡಾಡಿಮನ ಉಬ್ಬೋದು ಪ.
ಎಂಟು ದಿಕ್ಕಿಗೆ ದಿವ್ಯ ಮಂಟಪ ಮಣಿಯುಎಸೆಯೆ ಕಂಠದಿ ಸ್ವರವ ಕುಣಿಸುತಕಂಠದಿ ಸ್ವರವ ಕುಣಿಸುತಸಭೆಯೊಳು ನಟನೆ ಮಾಡುವರು ಕಡೆಯಿಲ್ಲ 1
ಛÀತ್ರ ಚಾಮರ ದಿವ್ಯ ಉತ್ತಮ ವ್ಯಜನವಸುತ್ತ ಬೀಸುವ ಸುಗುಣಿಯರುಸುತ್ತ ಬೀಸುವ ಸುಗುಣಿಯರುಸಭೆಯೊಳು ನರ್ತನ ಮಾಡೋರಮ್ಮ ಐವರು 2
ಕುಂದಣವುಳ್ಳ ಇಂದಿರೆರಮಣನಒಂದೊಂದು ಗುಣವ ವಿವರಿಸಿಒಂದೊಂದು ಗುಣವ ವಿವರಿಸಿಸಭೆಯೊಳು ವಂದಿಗರು ಬಂದು ಹೊಗಳೋರು3
ಭಾಗೀರಥಿ ಜಲವ ಬ್ಯಾಗ ಗಿಂಡಿಯ ತುಂಬಿಸಾಗರಶಯನನ ಅಭಿಷೇಕಸಾಗರಶಯನನ ಅಭಿಷೇಕ ಮಾಡುವಪನ್ನಂಗವೇಣಿಯರು ಕಡೆಯಿಲ್ಲ 4
ಮಲ್ಲಿಗೆ ತುರುಬಿನ ಮಲ್ಲಮುಷ್ಠಿಕರೆಲ್ಲಗುಲ್ಲು ಮಾಡುತಲೆ ಸಭೆಯೊಳು ಗುಲ್ಲು ಮಾಡುತಲೆ ಸಭೆಯೊಳು ಅಲ್ಲಲ್ಲೆಬಿಲ್ಲನೆತ್ತುವರು ಕಡೆಯಿಲ್ಲ 5
ಬಾಲೆಯರು ಅಂಗಾಲು ಲಾಲಿಸಿ ಒರೆಸುತಮ್ಯಾಲೆ ಪನ್ನೀರು ಎರೆಯುತ ಮ್ಯಾಲೆ ಪನ್ನೀರು ಎರೆಯುತ ರಂಗಯ್ಯನಕಾಲಿಗೆ ಎರಗುವರು ಐವರು 6
ಹರದೆಯರು ಅಂಗಾಲು ಸೆರಗಿಲೆ ಒರೆಸುತ ಕಿರುಗೆಜ್ಜೆ ರುಳಿಯ ಸರಿಸುತಕಿರುಗೆಜ್ಜೆ ರುಳಿಯ ಸರಿಸುತ ರಾಮೇಶನ ಎರಕಿ ನಿಂತವರು ಕಡೆಯಿಲ್ಲ7
****