RSS song .
ಸಾಸಿರ ಸಾಸಿರ ಕಂಠಗಳಿಂದ ಹೊಮ್ಮುತಿಹ ಸ್ವರ ಒಂದೇ |
ಭಾರತಭೂಮಿಯ ವೀರಸುಪುತ್ರರ ಧ್ಯೇಯಾದರ್ಶವು ಒಂದೇ |
ಜಗದ ಜನನಿಯ ಜಯಜಯಗಾನ... ಹಿಂದೂರಾಷ್ಟ್ರದ ಪುನರುತ್ಥಾನ ||ಪ||
ಗಿರಿ ಪರ್ವತಗಳ ಶೃಂಗಗಳಿಂದ
ಗುಡಿಗೋಪುರಗಳ ಶಿಖರಗಳಿಂದ
ಶತವಾಹಿನಿಯರ ಲಹರಿಗಳಿಂದ
ಮಾರ್ದನಿಸುತಲಿದೆ ಜಯಘೋಷ... ನವಚೈತನ್ಯದ ಸಂದೇಶ ||೧||
ಸಾಸಿರ ಲಕ್ಷದ ಲಕ್ಷವ ದಾಟಿ
ಕೋಟಿ ಹೃದಯಗಳ ತಂತಿಯ ಮೀಟಿ
ಲಂಘಿಸಿ ಕ್ಷಿತಿಜದ ದುರ್ಗಮ ಗಡಿಯ
ಸ್ಥಾಪಿಸಿ ನೂತನ ವಿಕ್ರಮವ... ಸಾಧಿಸಿ ಗೆಲುವಿನ ಸಂಭ್ರಮವ ||೨||
ಸುತ್ತಲು ಕಾದಿಹ ಶತ್ರು ಸಮೂಹಕೆ
ಹೆಡೆ ಎತ್ತಿಹ ವಿಧ್ವಂಸಕ ದ್ರೋಹಕೆ
ಸತ್ತಾರೂಢದ ಭ್ರಷ್ಟಾಚಾರಕೆ
ತಕ್ಕ ಉತ್ತರವ ನೀಡುವೆವು... ನಾಡಿನ ಹಿತ ಕಾಪಾಡುವೆವು ||೩||
***
sAsira sAsira kaMThagaLiMda hommutiha svara oMdE |
BArataBUmiya vIrasuputrara dhyEyAdarSavu oMdE |
jagada jananiya jayajayagAna... hiMdUrAShTrada punarutthAna ||pa||
giri parvatagaLa SRuMgagaLiMda
guDigOpuragaLa SiKaragaLiMda
SatavAhiniyara laharigaLiMda
mArdanisutalide jayaGOSha... navacaitanyada saMdESa ||1||
sAsira lakShada lakShava dATi
kOTi hRudayagaLa taMtiya mITi
laMGisi kShitijada durgama gaDiya
sthApisi nUtana vikramava... sAdhisi geluvina saMBramava ||2||
suttalu kAdiha Satru samUhake
heDe ettiha vidhvaMsaka drOhake
sattArUDhada BraShTAcArake
takka uttarava nIDuvevu... nADina hita kApADuvevu ||3||
***