Showing posts with label ಆಸೆ ಎಂಬ ಪಾಶ ಬಿಡದು ಮನುಜರಿಗೆ others. Show all posts
Showing posts with label ಆಸೆ ಎಂಬ ಪಾಶ ಬಿಡದು ಮನುಜರಿಗೆ others. Show all posts

Friday, 27 December 2019

ಆಸೆ ಎಂಬ ಪಾಶ ಬಿಡದು ಮನುಜರಿಗೆ others

ರಾಗ ಮುಖಾರಿ, ಝಂಪೆತಾಳ

ಆಸೆ ಎಂಬ ಪಾಶ ಬಿಡದು ಮನುಜರಿಗೆ
ಏಸು ಸೌಭಾಗ್ಯಗಳಿದ್ದರೆಯು ಮತ್ತೆ ||ಪ||

ವೃದ್ಧಾಪ್ಯದಿಂದ ಜರೆನೆರೆಯು ಬಧಿಸಿವಾಗ್ವಿ-
ರುದ್ಧ ಬಂದೆರೆಡು ದಂತಗಳಿಲ್ಲದೆ
ಶುದ್ಧ ಸಿತಕೇಶಂಗಳಾಗಿ ಸ್ವತಂತ್ರವಹ
ಬುದ್ಧಿ ಲೇಶಾಂಶವಿಲ್ಲದೆ ಇದ್ದವರಿಗು ||೧||

ಉದಯ ಮಧ್ಯಾಹ್ನ ಸಾಯಂ ತ್ರಿಕಾಲ ಕರ್ಮ
ಮೊದಲಾದವಿನಿತು ಒಡನೊಡನೆ ತೋರಿ
ಮಡದಿ ಕಾಲಕ್ರೀಡೆಯಹುದು ತತ್ಸಂಗದ
ಒದಗಿದಾಯುಷ್ಯ ನೀಗಿ ಹೋಹುದನರಿತು ||೨||

ಅಂತು ಅಂತಿಂತು ಮಯಾ ಮೋಹಿತದಿ ಮರು
ಚಿಂತಿಸುತ ನಿತ್ಯ ದುಃಖಿಪರಲ್ಲದೆ
ಅಂತಸ್ತನಾದ ನಿತ್ಯಾತ್ಮನ ಬಿಡದೆ ಏ-
ಕಾಂತದಲಿ ನೆನೆದು ಸಂತೋಷಿಪಗಲ್ಲದೆ ||೩||
******