Showing posts with label ಭೂತರಾಜರ ಸ್ತುತಿಸಿ ಖ್ಯಾತಿಗೊಳ್ಳೊ others. Show all posts
Showing posts with label ಭೂತರಾಜರ ಸ್ತುತಿಸಿ ಖ್ಯಾತಿಗೊಳ್ಳೊ others. Show all posts

Friday, 27 December 2019

ಭೂತರಾಜರ ಸ್ತುತಿಸಿ ಖ್ಯಾತಿಗೊಳ್ಳೊ others

ಭೂತರಾಜರ ಸ್ತುತಿಸಿ ಖ್ಯಾತಿಗೊಳ್ಳೊ ||ಪ||

ಪ್ರೀತಿ ಇವರಲಿ ಅಧಿಕ ವಾದಿರಾಜರಿಗೆ ||ಅ.ಪ||

ಆತನಾಜ್ಞೆಯಿಂದ ಧರಿಸಲುಕೋತಿಯಂತೆ ಹುಬ್ಬು
ಏಕೆ ಹಾರಿಸುವೆಜ್ಯೋತಿ ಸ್ವರೂಪಕ್ಕೆ ಬೂದಿಯು ಮುಸುಕಲು
ಪಾತಕಿಯು ತಾ ಮುಟ್ಟಿ ಬೊಚ್ಬಿ ಬಾರಿಸನೆ ||1||

ಗುರುಸೇವೆ ಇವರಂತೆ ಮಾಡ್ದವರು ಯಾರುಂಟುಗುರುಕೃಪಾ
ಇವರಂತೆ ಪಡೆದವರು ಯಾರೊಅರಿತು ನೋಡಲು ನಿರುತ ರತಿಗೆ
ಕಾರಣವುಂಟುನರಕುರಿ ಇದರ ಮರ್ಮವ ತಿಳಿವದುಂಟೆ ||2||

ಇಂದಿಗೂ ಸೋದೇಲಿ ಇವರದೇ ಗುರುಪೂಜೆಸುದ್ದಿ
ಸುಳ್ಳೆಂದವಗೆ ದೆಬ್ಬೆ ಪೂಜಾಸದ್ದಿಲ್ಲದಿವರಡಿ ಸ್ಮರಿಸುವುದೇ
ಗುರುಪೂಜಾತಂದೆ ಶ್ರೀ ನರಹರಿ ಒಪ್ಪುವಾ ಪೂಜಾ ||3||
********