ಕಾಖಂಡಕಿ ಶ್ರೀ ಕೃಷ್ಣದಾಸರು
ಹರಿಯೇ ಕಾವುದು ಕಾವದು ನೀ ಪ
ಕಾವುದು ಕಾವದು ಸಾದರದಿಂದಲಿ ದೇವನೆ ಯನ್ನ ಸದಾ | ಪಾದ ಯುಗ್ಮ ಪದಾ ಅ.ಪ
ಸ್ವರ್ಗದ ಸಾಸಿರ ಮಡಿಸುಖ ಭಕ್ತಿಯ ಮಾರ್ಗವ ನರಿಯದೇ | ದುರ್ಗುಣದಲಿ ತನು ಧನ ಸಿರಿಮದದಿಂ ಆರ್ಗೆಯ ಮನ್ನಿಸದೇ ಮಾರ್ಗಣವೆಸನುದರವ ಪೊರೆವುತ ಷಡ್ವರ್ಗರ ಬಲಿವಿಡಿದೇ| ಅರ್ಗಳಿಗೆಯು ನೆನಿಯದೆ ಬಹ ಜನ್ಮದಿ ದುರ್ಗತಿ ಭೋಗಿಸಿದೇ 1
ನಾ ಪೂರ್ವದಿ ಮಾಡಿದ ಬಹು ದುಷ್ಕøತ ಆ ಫಲದಿಂದ ಲೀಗ | ಮಹಾಪಯ ನಿಧಿಯೊಳಗೆ | ಧಡಿಗೆ | ಶ್ರೀಪತಿನಾವಿಕನಾಗಿ ನೀ ದಾಟಿಸಲೀಪಸುಗಳೆಂದನಗೆ | 2
ಕಂದನ ಗುಣದೋಷಂಗಳ ಆರಿಸೆ ತಂದೆಗಿದು ಚಿತವೆ | ನೀ ಬಂದು ಜಗದ್ಧರುವೆ | ಪತಿತರ ವೃಂದ ಉದ್ದರಿಸುವೆ | ಮಂದರ ಗಿರಿಧರ ತಂದೆ ಮಹಿಪತಿ ನಂದನವರ ಪ್ರಭುವೆ 3
**