Showing posts with label ಯೋಗಿ ವ್ಯಾಸರಾಯರೆಂಬ ವಿಚಿತ್ರ vijayeendra YOGI VYASARAYAREMBA VYASARAJA STUTIH. Show all posts
Showing posts with label ಯೋಗಿ ವ್ಯಾಸರಾಯರೆಂಬ ವಿಚಿತ್ರ vijayeendra YOGI VYASARAYAREMBA VYASARAJA STUTIH. Show all posts

Friday, 27 December 2019

ಯೋಗಿ ವ್ಯಾಸರಾಯರೆಂಬ ವಿಚಿತ್ರ ankita vijayeendra YOGI VYASARAYAREMBA VYASARAJA STUTIH

Audio by Vidwan Sumukh Moudgalya


ಶ್ರೀ ವಿಜಯೀಂದ್ರತೀರ್ಥರ ಕೃತಿ 

 ರಾಗ : ರೀತಿಗೌಳ   ಆದಿತಾಳ 

ಯೋಗಿ ವ್ಯಾಸರಾಯರೆಂಬ ವಿಚಿತ್ರ ಮೇಘ
 ವಿಷ್ಣುಪದವ ತೋರುಸುತ್ತ ಬಂತಿದೆಕೊ॥ಪ॥

ಮಾಯಿಮತವೆಂಬ ತಾರಾಮಂಡಲವ ಮುಸುಕುತ್ತ
ವಾಯುಗತಿಯಂತೆ ಗಮಿಸುತ್ತಲಿ
ಹೇಯ ಕಾಮಾದಿಗಳೆಂಬ ರಜವನಡಗಿಸುತ
ನಾಯಕನುಪೇಂದ್ರ ಆಜ್ಞೆಯ ಪಡೆದು॥೧॥

ಅಂಗಜನಯ್ಯನೆ ಪರನೆಂದು ಫುಡಿಫುಡಿಸುತ್ತ
ಕಂಗಳೆಂಬ ಮಿಂಚನೆ ನೆರಹಿ ಲೋಕದಿ
ಹಿಂಗದೆ ಪರಿವ ಅಜ್ಞಾನವೆಂಬ ಕತ್ತಲೆಯ
ಭಂಗಿಸಿ ಸುರೋತ್ತಮ ಪಥವ ತೋರಿಸುತ್ತ॥೨॥

ಸಿರಿಯರಸನ ಸಮ್ಯಕ್ ಜ್ಞಾನವೆಂಬ ಪೈರಿಗೆ
ಬೇರು ಬೀರೆ ಹರಿಕಥೆಯೆಂಬ ಮಳೆಗರಿದು
ಶಿಷ್ಯನ ಮನವೆಂಬ ಕೆರೆತುಂಬಿಸಿ ಕಂಗಳೆಂಬ
ಕೋಡಿ ವಾರಿಸುತ್ತಾ ವಿಜಯೀಂದ್ರನ ಗುರು॥೩॥
****

ಯೋಗಿ ವ್ಯಾಸರಾಯರೆಂಬ ವಿಚಿತ್ರ ಮೇಘ
ಬೇಗ ವಿಷ್ಣುಪದವ ತೋರುಸುತ್ತ ಬಂತಿದೆಕೊ ||pa||

ಮಾಯಿಮತವೆಂಬ ತಾರಾಮಂಡಲವ ಮುಸುಕುತ್ತ
ವಾಯುಗತಿಯಂತೆ ಗಮಿಸುತಲಿ
ಹೇಯ ಕಾಮಾದಿಗಳೆಂಬ ರಜವನಡಗಿಸುತ
ನಾಯಕನುಪೇಂದ್ರನಾಜ್ಞೆಯ ಪಡೆದು ||1||

ಅಂಗಜನಯ್ಯನೆ ಪರನೆಂದು ಫುಡಿಫುಡಿಸುತ್ತ
ಕಂಗಳೆಂಬ ಮಿಂಚನೆ ನೆರಹಿ ಲೋಕದಿ
ಹಿಂಗದೆ ಪರಿವ ಅಜ್ಞಾನ ನವೆಂಬ ಕತ್ತಲೆಯ
ಭಂಗಿಸಿ ಸುರಪಥವ ತೋರಿಸುತ್ತ ||2||

ಸಿರಿಯರಸನ ಸಮ್ಯಕ್ ಜ್ಞಾನವೆಂಬ ಪೈರಿಗೆ
ಬೇರುಬಿಡಿಸಿ ಹರಿಕಥೆಯೆಂಬ ಮಳೆಗರೆದು
ನೆರೆ ಶಿಷ್ಯಮನವೆಂಬ ಕೆರೆತುಂಬಿಸಿ ಕರಗಳೆಂಬ
ಭರಕೋಡಿ ಹರಿಸುತ ವಿಜಯೀಂದ್ರನ ಗುರು ||3||
*******