ಬಂದು ಮುಖವ ತೋರಿದಾ ಶ್ರೀ ಬಾಲಕೃಷ್ಣಾ ll ಪ ll
ಬಂದು ತೋರಿದ ಮುಖ ವಿಂದು ಸಂಸ್ಕಾರವ
ಪೊಂದಿ ಮನದಿ ಸದಾsಮಂದ ಚಿಂತಿಸಲೆಂದು ll ಅ ಪ ll
ಫಣಿಯು ವಿಸ್ತೃತವಿಹುದು ಮುಖವು ದುಂಡು l
ವನಜನಂಥೊಳಿಯುವುದು ll
ಸುನಸವು ಚಂಪಕ ತೆನೆಯಂತೆ ಶೀತಮುಕ್ತಾ l
ಮಣಿ ಮಾಲಿಯಂದದಿ ಮಿನುಗುತಿಹದು ರದಾ ll 1 ll
ಪವಳ ಶೋಣಿತ ತುಟಿಯು ದರ್ಪಣ ಕಾಂತಿ l
ನಿವಹದಂದದಿ ಗಂಡವು ll
ಶಿವರಿಪು ಬಿಲ್ಲಿನ ಛವಿಯಂತೆ ಭ್ರೂಚಿತ್ರ l
ಶ್ರವಣತನಕ ರೇಖಾ ಭುವನಜ ನಯನವು ll 2 ll
ಎಂದು ಕಾಣದ ವಸ್ತುವು ಸಂಸ್ಕಾರವ l
ಪೊಂದಲಾರದೀ ತನುವು ll
ಎಂದು ಚಿಕುರ ಮುಖಾವಿಂದು ತೋರಿಸಿ ಮನ l
ಪೊಂದುತಿರಲೂ ಪಾದ ಇಂದಿರೇಶ ಕೃಷ್ಣಾ ಬಂದು ತೋರಿದ. ll 3 ll
***