Showing posts with label ಳಳ- ಚಿತ್ರ ಗೀತೆ- ನಿನ್ನೊಲುಮೆ ನಮಗಿರಲಿ ತಂದೆ others NINNOLUME NAMAGIRALI TANDE. Show all posts
Showing posts with label ಳಳ- ಚಿತ್ರ ಗೀತೆ- ನಿನ್ನೊಲುಮೆ ನಮಗಿರಲಿ ತಂದೆ others NINNOLUME NAMAGIRALI TANDE. Show all posts

Thursday, 25 February 2021

ನಿನ್ನೊಲುಮೆ ನಮಗಿರಲಿ ತಂದೆ others NINNOLUME NAMAGIRALI TANDE

2026


Film: NAMMA MAKKALU  Starcast: K S ASHWATH, PANDARIBAI

Director: DIRECTORR NAGENDRA RAO  Producer: HARINI Year: 1969

Music: VIJAYA BHASKAR  Lyrics: R N JAYAGOPAL

Singer: B K SUMITHRA, L R ANJALI, KOUSALYA,P.B.SRINIVAS

***

ನಿನ್ನೊಲುಮೆ ನಮಗಿರಲಿ ತಂದೆ,

ಕೈ ಹಿಡಿದು ನೀ ನಡೆಸು ಮುಂದೆ


ತಾನುರಿದು ಜಗಕೆಲ್ಲ ಜ್ಯೋತಿಯನು ನೀಡುವ

ದೀಪದೊಳು ನೀನೆನ್ನ ಅನುಗೊಳಿಸು ತಂದೆ

ಕಾನನದ ಸುಮವೊಂದು ಸೌರಭವ ತಾ ಸೂಸಿ 

ಸಫಲತೆಯ  ಪಡೆವಂತೆ ಮಾಡೆನ್ನ ತಂದೆ

ಸಿರಿಯು ಸಂಪದ ಬೇಡ, ಯಾವ ವೈಭವ ಬೇಡ

ನಿನ್ನ ಕರುಣೆಯು ಒಂದೇ ಸಾಕೆಮಗೆ ತಂದೆ


ನಿನ್ನ ಈ ಮಕ್ಕಳನು ಪ್ರೇಮದಲಿ ನೀ ನೋಡು

ಈ ಮನೆಯೂ ಎಂದೆಂದು ನಗುವಂತೆ ನೀ ಮಾಡು

ನಂಬಿದರೆ ಭಯವಿಲ್ಲ, ನಂಬದಿರೆ ಬಾಳಿಲ್ಲ,

ಅಂಬಿಗನೆ ನೀ ನಡೆಸು ಈ ಬಾಳ ನೌಕೆ

ಯಾವ ನೋವೇ ಬರಲಿ ಎದೆ ಗುಂದದಿರಲಿ

ಸತ್ಯ ಮಾರ್ಗದೆ ನಡೆವ ಶಕ್ತಿ ಕೊಡು ತಂದೆ

**

Ninnoḷume namagirali tande

Kai hiḍidu nī naḍesu munde

Ninnoḷume namagirali tande

Kai hiḍidu nī naḍesu munde


Tānuridu jagakella jyōtiyanu nīḍuva

Dīpadōḷu nīnenna anugōḷisu tande

Kānanada sumavondu saurabhava tā sūsi

Saphalateya paḍevante māḍenna tande

Siriyu sampada bēḍa yāva vaibhava bēḍa

Siriyu sampada bēḍa yāva vaibhava bēḍa

Ninna karuṇeyu ondē sākemage tande || 1 ||


Ninna ī makkaḷanu prēmadali nī nōḍu

Ī maneyu endendu naguvante nī māḍu

Nambidare bhayavilla nambadire bāḷilla

Ambigane nī naḍesu ī bāḷa nauke

Yāva nōvē barali ede gundadirali

Yāva nōvē barali ede gundadirali

Satya mārgade naḍeva śakti koḍu tande || 2 ||

***