Showing posts with label ರಂಗನಾಥನೆ ನೀಲ ಘನಂಗ ದೇವರ ದೇವ ಗುಣಂಗಳ hayavadana RANGANATHANE NEELA GHANANGA DEVARA DEVA GUNANGALA. Show all posts
Showing posts with label ರಂಗನಾಥನೆ ನೀಲ ಘನಂಗ ದೇವರ ದೇವ ಗುಣಂಗಳ hayavadana RANGANATHANE NEELA GHANANGA DEVARA DEVA GUNANGALA. Show all posts

Saturday, 11 December 2021

ರಂಗನಾಥನೆ ನೀಲ ಘನಂಗ ದೇವರ ದೇವ ಗುಣಂಗಳ ankita hayavadana RANGANATHANE NEELA GHANANGA DEVARA DEVA GUNANGALA

ರಂಗನಾಥನೆ ನೀಲಘನಂಗ ದೇವರದೇವ ಗು-

ಣಂಗಳ ಖಣಿಯೆ ನಿನ್ನ ಪದಂಗಳು ಗತಿಯೆಮಗೆ ಪ.

ಉಭಯಕಾವೇರಿ ಮಧ್ಯದಲಭಯನೀವುತ ಪವಡಿಸಿದಬುಜಲೋಚನನೆ ನಿನ್ನ ವಿಭವಕ್ಕೆ ನಮೋಯೆಂಬೆ 1

ದೋಷದೂರನೆ ಭೂಮಿಗೆ ಭೂಮೋಹನನೆ ರಂಗಶ್ರೀಶ ನಿನ್ನ ನಂಬಿದೆ ಶೇಷÀಶಯನ ಕಾಯೊ 2

ಚೆಲುವ ನಿನ್ನನು ಪೋಲುವರಿಲ್ಲ ಮೂಜಗದೊಳು ಲಕುಮಿಯನಲ್ಲ ನಿನ್ನನು ಬಣ್ಣಿಸಲಳವಲ್ಲವೋ ಹಯವದನ 3

***